ಜಯಣ್ಣ, ಶಶಿಧರ್ ನಡುವೆ ಮಾತಿನ ಸಮರ

ನಗರಸಭೆ ಮೇಲ್ದರ್ಜೆಗೆ ಸುಳ್ಳು ಸಂದೇಶ
ರಾಯಚೂರು, ಮಾ.೦೧- ರಾಯಚೂರು ನಗರಸಭೆ ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಕುರಿತು ಬಜೆಟ್ ಅಯವ್ಯಯ ಮಂಡನೆ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಣ್ಣ ಮತ್ತು ಶಶಿರಾಜ ನಡುವೆ ಮಾತಿನ ಸಮರ ನಡೆಯಿತು. ಅವರಿಂದು ನಗರದ ಸಾರ್ವಜನಿಕ ಉದ್ಯಾನವನ ೨೦೨೨-೨೩ ಸಾಲಿನ ಅಯವ್ಯಯ ಬಜೆಟ್ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಜಯಣ್ಣ ಅವರು, ನಗರಸಭೆ ಮಹಾನಗರ ಪಾಲಿಕೆ ಮೇಲ್ದರ್ಜೆಯ ವಿಷಯ ಕುರಿತು ಶಾಸಕರು ಮತ್ತು ಸದಸ್ಯರು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಬಾರದು. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ರಾಯಚೂರು ಮತ್ತು ಬೆಳೆಗಾವಿ ನಗರಸಭೆ ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಕುರಿತು ಮಾನದಂಡಗಳನ್ನು ಪರಿಶೀಲನೆ ಮಾಡಿ ನಂತರ ಮೇಲ್ದರ್ಜೆಗೆ ಕುರಿತು ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ರಾಯಚೂರು ನಗರಸಭೆ ಮಹಾನಗರ ಪಾಲಿಕೆಗೆ ಸರಕಾರ ಅಸ್ತು ನೀಡಿಲ್ಲ ಮಾನದಂಡಗಳನ್ನು ಪರಿಶೀಲಿನೆಗೆ ಸರಕಾರ ಸೂಚನೆ ನೀಡಿದೆ ಎಂದು
ಸ್ಪಷ್ಟಪಡಿಸಿದರು.ಆದರೆ ಶಾಸಕರು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಬಾರದು. ತಪ್ಪು ಸಂದೇಶದಿಂದ ನಿಮ್ಮ ವೃತ್ತಿಗೆ ಅವಮಾನವಾಗುತ್ತದೆ ಎಂದರು. ಜಯಣ್ಣ ಮತ್ತು ಬಿಜೆಪಿ ಸದಸ್ಯರ ನಡುವೆ ನಗರಸಭೆ ಮಹಾನಗರ ಪಾಲಿಕೆ ಕುರಿತು ಗಂಭೀರವಾದ ಚರ್ಚೆ ನಡೆಯಿತು. ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಸರಕಾರ ಅಸ್ತು ನೀಡಿದೆ ಎಂದು ಶಾಸಕರು ಮತ್ತು ಆಯುಕ್ತರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಬಾರದು. ಡಿ.೨೦, ೨೦೨೦ ರಲ್ಲಿ ನಗರಸಭೆ
ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ನಗರಸಭೆಯನ್ನ ಮಹಾನಗರ ಪಾಲಿಕೆ ಮಾಡಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು ಎಂದು ಹೇಳಿದರು.
ನಗರಸಭೆ ಸದಸ್ಯ ಶಶಿದರ ಮಾತನಾಡಿ ನಗರಸಭೆ ಉನ್ನತಿಕರಣಕ್ಕೆ ಯಾವುದೇ ಅಡತಡೆಗಳಿಲ್ಲ ನಗರಸಭೆ ಮೂಲಭೂತ ಸೌಕರ್ಯಕ್ಕೆ ಸರಕಾರ ಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಗುರುಲಿಂಗಪ್ಪ, ಉಪಾಧ್ಯಕ್ಷ ನರಸಮ್ಮ ಮಡಿಗೇರಿ, ನಗರಸಭೆ ಸದಸ್ಯ ಜಯಣ್ಣ, ನಗರಸಭೆ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.