ಜಯಘೋಷಗಳ ಮಧ್ಯ ಸಮಯಲಿಂಗ ದೇವಸ್ಥಾನ ಲೋಕಾರ್ಪಣೆ

ಕಲಬುರಗಿ:ಜು.29:ಬಾಜಾ ಬಜಂತ್ರಿಗಳ ಸದ್ದು,ಕನ್ಯಾಮಣಿಗಳ ಕುಂಬ ಕಳಸ,ಡೊಳ್ಳು ವಾದನ, ಭಕ್ತರ ಜಯಘೋಷಗಳ ಮದ್ಯೆ ಸಮಯಲಿಂಗ ದೇವಸ್ಥಾನವು ಪೂಜ್ಯಶ್ರೀ ಹವಾ ಮಲ್ಲಿನಾಥ ಮಹಾರಾಜರು ಲೋಕಾರ್ಪಣೆ ಮಾಡಿದರು.

ನಾಗರ ಪಂಚಮಿ ಅಮಾವಾಸ್ಯೆ ದಿನದಂದು ಬಿದರ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮುದಬಾಳ ಗ್ರಾಮದ ಹೊರ ವಲಯದಲ್ಲಿನ ಸಮಯಲಿಂಗ ಸ್ಥಾಪನೆ ಮತ್ತು ಕಳಸಾ ರೋಹಣ ಬಹಳ ವಿಜೃಂಭಣೆಯಿಂದ ನಡೆಯಿತು.

ಇದಕ್ಕೂ ಮುನ್ನ ಮದಬಾಳ ಗ್ರಾಮ ಮತ್ತು ತಾಂಡಾದಲ್ಲಿ ಪೂಜ್ಯಶ್ರೀ ಹವಾ ಮಲ್ಲಿನಾಥ ಮಹಾರಾಜರ ಭವ್ಯ ಮೆರವಣಿಗೆಯನ್ನು ಸಕಲ ವಾಧ್ಯಗಳೊಂದಿಗೆ,ಯುವತಿಯರ ಕುಂಬ ಕಳಸಗಳೊಂದಿಗರ ಗ್ರಾಮದ ಪ್ರಮುಖ ಬದಿಗಳಲ್ಲಿ ಮೆರವಣಿಗೆ ನಡೆಯಿತು.

ನಂತರ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸಾರೋಹಣವನ್ನು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ “ಜೈ ಹವಾ ಶ ಮಲ್ಲಿನಾಥ ಮಹಾರಜ ಕೀ ಜೈ,ಮತ್ತು ಶಿವ ಪರಮೇಶ್ವರ ಮಹಾರಾಜಕೂ ಜೈ,ಸಮಯಲಿಂಗ ಮಹಾರಾಜ ಕೂ ಜೈ” ಎಂಬ ಜಯಘೋಷಗಳ ಮದ್ಯೆ ಲೋಕಾರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಮದಬಾಳ, ವಚನ ಚಿಗರಹಳ್ಳಿ,ಗಂವಾರ,ಚಿಕ್ಕ ಮದಬಾಳ, ಖಾದ್ಯಾಪೂರ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು.