ಜಯಂತ್ಯೋತ್ಸವ ಕಾರ್ಯಕ್ರಮ


ನವಲಗುಂದ,ಸೆ.1: ಶರಣ ಶ್ರೀ ನುಲಿಯ ಚಂದಯ್ಯ ನವರು 12ನೇ ಶತಮಾನದ ವಚನಕಾರರಾಗಿದ್ದು, ಇವರು ಬಸವಣ್ಣನವರ ಸಮಕಾಲೀನರಾಗಿದ್ದರು ಎಂದು ತಹಶೀಲ್ದಾರ್ ಸುಧೀರ್ ಸಾಹುಕಾರ್ ಹೇಳಿದರು.
ಅವರುತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶಿವಶರಣ ಕಾಯಕಯೋಗಿ ಶ್ರೀ ನುಲಿಯ ಚಂದಯ್ಯನವರು ಹಾಗೂ ಶ್ರೀ ಬ್ರಹ್ಮಶ್ರೀ ನಾರಾಯಣ ಗುರೂಜಿಯವರ ಜಯಂತೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶರಣ ಚಂದಯ್ಯನವರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರು. ಕಾಯಕ ಮಾಡಿ ಅದಾಯದಿಂದ ಗುರುಲಿಂಗ ಜಂಗಮ ಸೇವೆ ಮಾಡುತ್ತಿದ್ದರು ಎಂದರು.
ಶ್ರೀ ಬ್ರಹ್ಮಶ್ರೀ ನಾರಾಯಣ ಗುರೂಜಿಯವರು ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಕಾರಣರಾದವರು ಎಂದರು.
ನಂತರ ನುಲಿಯ ಚಂದಯ್ಯನವರು ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ನಾಗರಾಜ್ ಭಜಂತ್ರಿ, ಸಮಾಜದ ಹಿರಿಯರಾದ ಯಲ್ಲಪ್ಪ ಭಜಂತ್ರಿ, ಗೋಪಾಲ ಭಜಂತ್ರಿ, ರವಿ ಭಜಂತ್ರಿ, ರಮೇಶ ಭಜಂತ್ರಿ ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರ್ ಕಛೇರಿ ಸಿಬ್ಬಂದಿಗಳು ಸೇರಿದಂತೆ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.