ಜಯಂತ್ಯೋತ್ಸವ ಆಚರಣೆಗೆ ನಿಧಾರ


ಲಕ್ಷ್ಮೇಶ್ವರ,ಫೆ.12: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿದ್ದ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಲಂಬಾಣಿ ಬಂಜಾರ ಸಮಾಜದ ಡಾವ ಕಾರ್ಬಾರಿ ನಾಯಕ್ ಸೇರಿದಂತೆ ಪ್ರಮುಖರ ಸಭೆ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಸೇರಿ ಪಟ್ಟಣದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು ಆಚರಿಸಲು ನಿರ್ಧರಿಸಿದರು.
ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಫೆಬ್ರವರಿ 29ರಂದು ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು ಅದ್ದೂರಿನಿಂದ ಆಚರಿಸಲು ನಿರ್ಧರಿಸಲಾಯಿತು.
ಫೆಬ್ರುವರಿ 29 ರಂದು ಶ್ರೀ ಸೋಮೇಶ್ವರ ದೇವಸ್ಥಾನದ ತೇರಿನ ಮನೆ ಆವರಣದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು 29ರಂದು ಮುಂಜಾನೆ ಪಟ್ಟಣದ ಪಂಪ ಸರ್ಕಲಿನಿಂದ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯಮರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಜರುಗಲಿದೆ ಎಂದರು.
ಈಗಾಗಲೇ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ 15 ಗುಂಟೆ ನಿವೇಶನ ಲಭವಾಗಿದ್ದು ಜಯಂತೋತ್ಸವದ ದಿನದಂದು ಸಭಾಭವನಕ್ಕೆ ಅಡಿಗಲ್ಲು ಕಾರ್ಯಕ್ರಮ ಜರುಗಲಿದೆ ಈ ಕಾರ್ಯಕ್ರಮಕ್ಕೆ ಎರಡು ತಾಲೂಕುಗಳಿಂದ ಸುಮಾರು 10000ಕ್ಕೂ ಹೆಚ್ಚು ಸಮಾಜ ಬಾಂಧವರು ಸಮಾವೇಶಗೊಳ್ಳಲಿದ್ದಾರೆ ಎಂದರು ಮೆರವಣಿಗೆಯಲ್ಲಿ ಮಹಿಳೆಯರು ಕುಂಭಮೇಳದೊಂದಿಗೆ ಭಾಗವಹಿಸಲಿದ್ದಾರೆ ಎಂದರು ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.
ಈ ಸಂದರ್ಭದಲ್ಲಿ ಗುರಪ್ಪ ಲಮಾಣಿ ಈಶಪ್ಪ ಲಮಾಣಿ ಜಾನು ಲಮಾಣಿ ಶಿವಪಾ ಲಮಾಣಿ ದೇವಪ್ಪ ಲಮಾಣಿ ನಾನಪ್ಪ ಲಮಾಣಿ ಪರಮೇಶ ಲಮಾಣಿ ಕೆ ಆರ್ ಲಮಾಣಿ ಸೋಮಣ್ಣ ಲಮಾಣಿ ಲಾಲಪ್ಪ ಲಮಾಣಿ ಗಣೇಶ್ ಲಮಾಣಿ ಪರಮೇಶ ಲಮಾಣಿ ಗಣೇಶ ಲಮಾಣಿ ಮಹೇಶ ಲಮಾಣಿ ಲಕ್ಷ್ಮಣ ಲಮಾಣಿ ಪುಂಡಲಿಕ ಲಮಾಣಿ ಮಾನಪ್ಪ ಲಮಾಣಿ ದೀಪಕ ಲಮಾಣಿ ಶೇಖಪ್ಪ ಲಮಾಣಿ ಸೇರಿದಂತೆ ಸಮಾಜದ ಮುಖಂಡರು ಹಿರಿಯರು ಭಾಗವಹಿಸಿದ್ದರು