ಜಯಂತಿ ಕೇವಲ ಆಚರಣೆಗೆ   ಸೀಮಿತವಾಗದೆ ಆದಶ೯ ಪಾಲಿಸಿ: ಬಯ್ಯಾಪುರ.


ಸಂಜೆವಾಣಿ ವಾರ್ತೆ
ಕುಕನೂರು, ಮೇ.11:  ತಾಲೂಕು ತಳಕಲ್ ಗ್ರಾಮದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ  ಹಾಗು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾಯ೯ ಕ್ರಮ ಸಂಭ್ರಮದಿಂದ ಆಚರಿಸಲಾಯಿತು. ಕಾಯ೯ಕ್ರಮ ಉದ್ಘಾಟಿಸಿದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ,  ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಗುಣಗಳನ್ನು ನಾವೆಲ್ಲರು  ಮೈಗೂಡಿಸಿಕೊಂಡು  ಬದುಕು ಸಾಗಿಸಬೇಕು,    
ಹಾಗೂ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ಸಮಾಜಗಳಲ್ಲಿರುವ ಪಿಡುಗುಗಳನ್ನು ತೊಲಗಿಸಲು ಶಿವಶರಣರು, ಶರಣೆಯರು ತಮ್ಮ ವಚನ ಸಾಹಿತ್ಯದ ಮೂಲಕ ಮನುಕುಲದ ಏಳ್ಗೆ ಮಾಡಿದವರು  ಎಂದು ಹೇಳಿದರು. 
ಸಾನಿಧ್ಯವನ್ನು ವಹಿಸಿ ಅರಳಿಹಳ್ಳಿ ರಾಜರಾಜೇಶ್ವರಿ ಶ್ರೀಗಳು  ಸಾನಿಧ್ಯ ನುಡಿ ಹೇಳಿದರು. ಶಾಸಕ ಬಸವರಾಜ ರಾಯರೆಡ್ಡಿ  ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ  ಸಂಗಪ್ಪ ವಕ್ಕಳದ ,
ದದೇಗಲ್ ಆತ್ಮಾನಂದ ಭಾರತಿ  ಶ್ರೀಗಳು,  ಸತ್ಯ ನಾರಾಯಣಪ್ಪ ಹರಪನಹಳ್ಳಿ, ಬಸವರಾಜ ಉಳ್ಳಾಗಡ್ಡಿ,   ಶೇಖರಗೌಡ ಮಾಲಿಪಾಟೀಲ, ಜಗದೀಶ ಸಿಂಗನಾಳ, ಸಿ.ವಿ.ಚಂದ್ರಶೇಖರ್, ಗಂಗಮ್ಮ ಗುಳಗಣ್ಣವರ್, ಝಹೀರಾ  ಬೇಗಂ ಕೊಪ್ಪಳ, ಮಂಜುಳಾ ಕರಡಿ, ಗಂಗಮ್ಮ ಗಡಗಿ, ಶರಣಪ್ಪ ಕೊಪ್ಪಳ, ಶಿವನಗೌಡ ದಾನರಡ್ಡಿ, ಯಂಕಣ್ಣ ಯರಾಶಿ,ಬಿ.ಎಮ್.ಶಿರೂರ, ಚಂದ್ರಶೇಖರಯ್ಯ ಹಿರೇಮಠ,   ಶೇಖರ ಗಿರಡ್ಡಿ,       ಮಮತಾ ರಾಯರೆಡ್ಡಿ ,ತಿಮ್ಮಣ್ಣ ಚೌಡಿ ,    ಪ್ರಕಾಶ್ ಮೇಟಿ ,ಗೌರಮ್ಮ ನಾಗನೂರು ಮೊದಲಾದವರು ಉಪಸ್ಥಿತರಿದ್ದರು.

One attachment • Scanned by Gmail