
ಸೈದಾಪುರ:ಮಾ.31:ಗತಕಾಲದಲ್ಲಿನ ಮಹಾತ್ಮರ ಆದರ್ಶಗಳನ್ನು ತಿಳಿಸುವ ಜಯಂತಿಗಳು ಜೀವನಕ್ಕೆ ದಾರಿದೀಪ ಎಂದು ಕಡೇಚೂರು ಸಿಆರ್‍ಪಿ ಸುಬ್ರಮಣಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿ. ತೋಟಗಾರಿಕೆ ಕೆಲಸ ಮಾಡುವ ತಿಗಳ ಸಮುದಾಯವು ಶ್ರಮ ಜೀವನಕ್ಕೆ ಹೆಸರುವಾಸಿಯಾಗಿದೆ. ಇಂದಿನ ಆಧುನಿಕತೆಯ ಜೀವನದಲ್ಲಿ ಬದುಕುತ್ತಿರುವ ನಾವುಗಳು ಅಂತಹ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನಕ್ಕೆ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರು ಶಿವರಾಜಪ್ಪ, ಸೈದಾಪುರ ಸಿಆರ್‍ಪಿ ಮುಕುಂದರಾವ್ ಕುಲಕರ್ಣಿ, ಬಾಡಿಯಾಲ ಸಿಆರ್‍ಪಿ ಷಣ್ಮುಖ ತಾಂಬೂಳಕರ್, ಸಹ ಶಿಕ್ಷಕರಾದ ಶಿವಕಾಂತಮ್ಮ, ವಿಜಯಲಕ್ಷ್ಮೀ, ರತ್ನಕ್ಕ ಜಾಲಿಗಿಡ, ಸಿದ್ರಾಮ ತೊಗಟವೀರ, ಮಹಿಪಾಲರೆಡ್ಡಿ, ಅತಿಥಿ ಶಿಕ್ಷಕರಾದ ಬಲರಾಮ, ಶಿವಗಂಗಾ, ಮರಿಲಿಂಗಮ್ಮ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.