ಜಯಂತಿಗಳಲ್ಲಿ ವಿಶೇಷವಾದದ್ದು, ವಿವೇಕಾನಂದರ ಜಯಂತಿ:

ಸಂಡೂರು.ಜ.13.01.ಸಮಾಜದಲ್ಲಿ ನೂರಾರು ಜಯಂತಿಗಳ ಆಚರಣೆ ನಾವು ಮಾಡುತ್ತೇವೆ, ಜಾತಿಗೊಂದು ಜಯಂತಿಗಳು, ರಾಷ್ಟಭಕ್ತರು, ರಾಜಕಾರಣಿಗಳು ಧುರೀಣರು ಇತ್ಯಾದಿ ಆದರೆ ಎಲ್ಲರಿಗೂ ಮಿಗಿಲಾಗಿ ವಿವೇಕಾನಂದರ ಜಯಂತಿ ವಿಶೇಷವಾಗಿ ಮುಕ್ತವಾಗಿ ಆಚರಿಸುವ ಜಯಂತಿ ಸ್ಥಾನದಲ್ಲಿ ನಿಲ್ಲುತ್ತದೆ. ಎಂದು ಅವರು ಹೇಳಿದರು.
ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿವೇಕಾನಂದರು ನೀಡಿದ ಅಂಶಗಳಲ್ಲಿ ಕೇವಲ ಅಂಶಗಳನ್ನು ನಾವು ಅನುಕರಣೆ ಮಾಡದೇ ಇದ್ದರೆ ನಾವು ಜೀವನ ನಿರ್ವಹಿಸಲಿಕ್ಕೂ ಯೊಗ್ಯರಲ್ಲ, ವಿವೇಕರು ಬದುಕಿದ್ದು ಕೇವಲ 39 ವರ್ಷ, ಅದರೆ ಸಾಧನೆ 1000 ವರ್ಷಕ್ಕೆ ಸಮಾನವಾದದ್ದು, ರಾಮಕೃಷ್ಣರ ಸಂಪರ್ಕ ನಂತರ ಅವರ ಹೆಸರು, ಉಡುಗೆ, ತೊಡುಗೆ ಜೊತೆಗೆ ಅವರ ಛಾಯೆಯೆ ಬದಲಾಗುತ್ತ ಹೋಯಿತು, ವಿವೇಕಾನಂದ ದೇಶಭಕ್ತ ಸಂತ. ಧರ್ಮ, ದೇಶ, ಬಗ್ಗೆ ಅಪಾರ ಗೌರವ ಇರಿಸಿದ್ದರು, ಬಡತನ ನಿರ್ಮುಲನೆಗೆ ಶಿಕ್ಷಣ ಅಗತ್ಯ ಎಂದು ಸಾರಿದರು, ನಾವು ಮೊದಲು ಭಾರತೀಯರಾಗಬೇಕು ನಂತರ ನಾವು ಸ್ಥಳೀಯ ಆಲೋಚನೆ ಬೇಕು. ದೀನರನ್ನು ದಲಿತರನ್ನು ದೇವರಂತೆ ಕಾಣುತ್ತಾ, ಅವರ ಸೇವೆ ಮಾಡಬೇಕು, ಒಳ್ಳೆಯದು ಮಾಡದೇ ಇದ್ರು ಪರವಾಗಿಲ್ಲ ಕೆಟ್ಟದ್ದು ಮಾಡ ಬಾರದು. ಸಾಯಿವ ಮುನ್ನ ಸಾಧಿಸು ಎಂದವರು ವಿವೇಕಾನಂದರು, ಸರ್ವ ಧರ್ಮ ಸಮ್ಮೇಳನದಲ್ಲಿ ಕ್ರೈಸ್ತರ ವೈಭವೀಕರಣಕ್ಕೆ ವೇದಿಕೆ ಯಾಗಿತ್ತು ಅದರೆ ಅದರ ಸಂಪೂರ್ಣ ಉಪಯೋಗ ಪಡೆದದ್ದು ಸ್ವಾಮಿ ವಿವೇಕಾನಂದರು, ಅಲ್ಲಿ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಎಂದು ಅವರು ಹೇಳಿದರು.
ಬಿ.ಊಮಾಪತಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮಾತಾನಾಡುತ್ತಾ ಆರೊಗ್ಯ ಇದ್ದರೆ ನಾವು ಸಾಧನೆ ಮಾಡಲು ಸಹಾಯ, ಕೋವಿಡ್ ನಂತರ ನಮಗೆ ಬಂದ ಮೊದಲ ಜಯಂತಿ ಇದಾಗಿದೆ ಶಾಲೆಗೆ ಬರದೆ ಕಲಿಕೆ ಅಸಾದ್ಯಾ ಹಾಗಾಗಿ ನೀವು ಸರ್ಕಾರ ನೀಡಿರುವ ನಿಯಮಗಳ ಪಾಲನೆ ಮಾಡಿಕೊಂಡು ಶಾಲೆಗೆ ಹಾಜರು ಆಗಬೇಕು ಎಂದು ಕರೋನ ಕುರಿತಾದ ಆರೋಗ್ಯ ಸೂಚನೆಗಳನ್ನು ನೀಡಿದರು. ಯುವ ಪೀಳಿಗೆ ದಾರಿ ತಪ್ಪುತ್ತಿದ್ದಾರೆ ಅವರಲ್ಲಿ ದೇಶಭಕ್ತಿ, ದೇಶಪ್ರೇಮ ಬಂದಾಗ ಮಾತ್ರವೇ ದೇಶ ಬದಲಾಗಲು ಸಹಾಯಕವಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಅಧ್ಯಕ್ಷರಾದ ಡಾ.ಕೆ.ಕರಿಬಸನವನಗೌಡರು ಮಾತನಾಡುತ್ತಾ ದೇಶಕ್ಕೆ ಅಲ್ಲ, ವಿಶ್ವಕ್ಕೆ ಬೇಕಾದ ಮಾಣಿಕ್ಯ, ವಿವೇಕಾನಂದರು ದೇಶ, ಮತ್ತು ಜನರ ಉದ್ದಾರಕ್ಕೆ ವಿವೇಕಾನಂದರ ತತ್ವ ಪಾಲನೆ ಅಗತ್ಯ ಎಂದರು.
ವಿದ್ಯಾರ್ಥಿ ಗಂಗಬಾಯಿ, ಗೌತಮ್ ನಾಯ್ಕ, ಅಮೃತಬಾಯಿ, ಪ್ರಶಾಂತ್ ಬಸವನಗೌಡರ್, ಯುವಾ ಬ್ರಿಗೇಡ್ ಬಳ್ಳಾರಿ ವಿಭಾಗ ಸಹ ಸಂಚಾಲಕರು, ಇವರು ವಿವೇಕಾನಂದರು ವಿಶ್ವಕ್ಕೆ ನೀಡಿದ ಕೊಡುಗೆಗಳ ಕುರಿತಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಂಧ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಜೈತುನ್ ಬೀ ಶಿಕ್ಷಕಿ ಸ್ವಾಗತಿಸಿದರು, ಗೀತಾ ಪೋಳ್ ಶಿಕ್ಷಕಿ ವಂದಿಸಿದರು. ಮಾರುತಿ ಶಿಕ್ಷಕರು ನಿರೂಪಿಸಿದರು, ಶಿಕ್ಷಕರಾದ ಮಂಜುನಾಥ, ಪುರುಷೋತ್ತಮ, ನವೀನ್ ಕುಮಾರ್, ಫಾರೂಕ್ ಅಬ್ದುಲ್, ವೈಧ್ಯರಾದ ಸತೀಶ್ ಮತ್ತು ಇತರರು ಉಪಸ್ಥಿತರಿದ್ದರು,