ಜಮ್ಮು – ಕಾಶ್ಮೀರ ಪ್ರತಿಜಿಲ್ಲೆಯಲ್ಲೂ ಟಾಕೀಸ್ ನಿರ್ಮಾಣ

ಕಾಶ್ಮೀರ, ಸೆ.೧೯- ಜಮ್ಮು ಕಾಶ್ಮೀರದ ಪ್ರತಿ ಜಿಲ್ಲೆಯಲ್ಲೂ ಚಿತ್ರಮಂದಿರ ನಿರ್ಮಾಣ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ಅವರು ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಮಾಡಿದ ಬಳಿಕ ಪ್ರತಿಕ್ರಿಯಿಸಿದರು.

ಪುಲ್ವಾಮಾ ಹಾಗೂ ಶೋಫಿಯಾನ್ ವಲಯದಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಯಾಗಿರುವ ಬಗ್ಗೆ ಸಂತಸ ಹಂಚಿಕೊಂಡರು.

ಈ ಮಲ್ಲಿಪ್ಲೆಕ್ಸ್ ಥಿಯೇಟರ್‌ನಿದ ಕಣಿವೆ ರಾಜ್ಯದ ಜನತೆಗೆ ಎಲ್ಲರಂತೆ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ. ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳು ಈ ಮಲ್ಟಿಪ್ಲೇಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಸಮೂಹಕ್ಕೆ ತರಬೇತಿ ನೀಡುವ ಕೇಂದ್ರಗಳು ಆಗಿವೆ ಎಂದರು.

ಸಿನಿಮಾ ಪ್ರೊಡಕ್ಷನ್, ನಿರ್ಮಾಣ, ಕಿರು ಚಿತ್ರ ನಿರ್ಮಾಣ, ನಿರ್ದೇಶನ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂದು ಅವರು ಉಲ್ಲೇಖಿಸಿದರು.

೧೯೮೫ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲಾ ಸಿನಿಮಾ ಥಿಯೇಟರ್‌ಗಳು ಮುಚ್ಚಿ ಹೋಗಿತ್ತು. ಇನ್ನು ೧೯೯೯ರಲ್ಲಿ ಲಾಲ್ ಚೌಕ್‌ನಲ್ಲಿ ಸಿನಿಮಾ ಥಿಯೇಟರ್ ಮತ್ತೆ ತೆರೆಯಲಾಯಿತು. ಆದರೆ ಅಷ್ಟೇ ವೇಗದಲ್ಲಿ ಈ ಚಿತ್ರಮಂದಿರ ಮುಚ್ಚಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಜನರು ೧೯೯೦ರ ಬಳಿಕ ಹೊರಗಡೆ ಹೋಗಿ ಸಿನಿಮಾ ಮಂದಿರದಲ್ಲಿ ಚಿತ್ರ ನೋಡಿದ ಊದಾಹರಣೆಗಳಿಲ್ಲ. ಹೋಗುವ ಅವಕಾಶವೂ ಇರಲಿಲ್ಲ.

ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಕಾಶ್ಮೀರ ಮತ್ತೆ ಸಹಜಸ್ಥಿತಿಗೆ ಮರಳುತ್ತಿದೆ.