ಜಮ್ಮು ಕಾಶ್ಮೀರ ಜನರಿಗೆ ಆರೋಗ್ಯ ಸೌಲಭ್ಯ; ನಾಳೆ ಯೋಜನೆಗೆ ಪ್ರಧಾನಿ ಚಾಲನೆ

ನವದೆಹಲಿ, ಡಿ.25- ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕಮಿಟಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇದೀಗ ಕಣಿವೆ ರಾಜ್ಯಕ್ಕೆ ಬಂಪರ್ ಉಡುಗೊರೆ ನೀಡಲು ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ 21 ಲಕ್ಷ ಜನರಿಗೆ ಎಬಿ-ಪಿಎಂ ಜಾಯ್ -ಸೆಹತ್ ಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಯೋಜಬೆಯಾದ ಎಬಿ ಪಿಎಂ ಜಾಯ್ ಯೋಜನೆಯಡಿ ಜಮ್ಮು-ಕಾಶ್ಮೀರದ 2100000 ನಿವಾಸಿಗಳು ವಾರ್ಷಿಕ ಐದು ಲಕ್ಷ ರೂಪಾಯಿವರೆಗೆ ಆರೋಗ್ಯ ಸೌಲಭ್ಯ ಪಡೆಯಲಿದ್ದಾರೆ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಜಮ್ಮು-ಕಾಶ್ಮೀರದ 2100000 ಅರ್ಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲಿದ್ದಾರೆ.

2011 ಜನಗಣತಿಯ ಪ್ರಕಾರ ಸಾಮಾಜಿಕ ಆರ್ಥಿಕ ಹಾಗೂ ಜಾತಿಯ ಹಿಂದುಳಿದ ಸಮುದಾಯಕ್ಕೆ ಸೌಲಭ್ಯ ದೊರೆಯಲಿದೆ

ಈ ಯೋಜನೆಯಡಿ ಜಮ್ಮು-ಕಾಶ್ಮೀರದ 219 ಆಸ್ಪತ್ರೆಗಳಲ್ಲಿ ಅಲ್ಲಿನ ಜನ ಆರೋಗ್ಯ ಸೌಲಭ್ಯ ಪಡೆದುಕೊಳ್ಳಬಹುದು ಯೋಜನೆಯಲ್ಲಿ 34 ಖಾಸಗಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಇದಲ್ಲದೆ ದೇಶಾದ್ಯಂತ ಇರುವ 24ಸಾವಿರ 148 ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಪಡೆಯಲು ಜಮ್ಮು-ಕಾಶ್ಮೀರದ ಜನರಿಗೆ ಅವಕಾಶ ಮಾಡಿಕೊಡಲಾಗಿದೆ

ಪಿಎಂ ಜಾಯ್ ಸೌಲಭ್ಯಗಳು

  • ದೇಶದ ಯಾವುದೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿವರ್ಷ ಐದು ಲಕ್ಷ ರೂಪಾಯಿವರೆಗೆ ಆರೋಗ್ಯ ಸೇವೆ ಪಡೆಯುವ ಸೌಲಭ್ಯ
  • ಕುಟುಂಬದ ಎಷ್ಟೇ ಜನರಿದ್ದರೂ ಈ ಸೌಲಭ್ಯ ಪಡೆಯಲು ಅರ್ಹರು
  • ಅಂದಾಜು 107.4 ದಶಲಕ್ಷ ಬಡಜನರು ಮತ್ತು ಆರ್ಥಿಕವಾಗಿ ದುರ್ಬಲ ಜನರಿಗೆ ಈ ಸೌಲಭ್ಯ
  • ಪಿಎಂ ಜಾಯ್ ಯೋಜನೆಯಡಿ ನಗದು ರಹಿತವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿವರ್ಷ ಚಿಕಿತ್ಸೆ ಪಡೆಯಲು ಅವಕಾಶ.
  • ಪ್ರತಿವರ್ಷ ದೇಶದಲ್ಲಿ ಆರು ಕೋಟಿ ಬಡಜನರು ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ
  • ಈ ಯೋಜನೆಯಡಿ ಶಸ್ತ್ರಚಿಕಿತ್ಸೆ ರಿಂದ 3ದಿನ ಮತ್ತು ನಂತರ 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ
  • ಕುಟುಂಬದಲ್ಲಿ ಎಲ್ಲರು ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರು ಮತ್ತು ಯಾವುದೇ ಲಿಂಗ ಮತ್ತು ವಯಸ್ಸಿನ ತಾರತಮ್ಯ
  • ದೇಶಾದ್ಯಂತ ಎಲ್ಲಿ ಬೇಕಾದರೂ ಸೌಲಭ್ಯ ಪಡೆಯುವ ಅವಕಾಶ