ಜಮ್ಮು ಕಾಶ್ಮೀರ: ಗೃಹ ಬಂಧನದಿಂದ ಉಮರ್ ಫಾರೂಕ್ ಬಂದ ಮುಕ್ತ

ಶ್ರೀನಗರ,ಸೆ.23- ಜಮ್ಮು ಕಾಶ್ಮೀರದಲ್ಲಿ ಕಲಂ 370 ರದ್ದು ಮಾಡಿದ ಸಮಯದಲ್ಲಿ ಬಂಧಿತರಾಗಿದ್ದ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ನಾಲ್ಕು ವರ್ಷಗಳ ನಂತರ ಗೃಹಬಂಧನದಿಂದ ಬಂಧ ಮುಕ್ತಗೊಳಿಸಲಾಗಿದೆ.

“ರಾಷ್ಟ್ರ ವಿರೋಧಿ, ಶಾಂತಿ ವಿರೋಧಿ ಮತ್ತು ಪ್ರತ್ಯೇಕತಾವಾದಿ” ಎಂದು ತಮ್ಮನ್ನು ಬ್ರಾಂಡ್ ಮಾಡಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.

ಬಿಡುಗಡೆ ಬಳಿಕ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಅವರು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಂತೆ ಕರೆ ಒತ್ತಾಯಿಸಿದ್ದಾರೆ

ಆರ್ಟಿಕಲ್ 370 ರ ರದ್ದತಿ ನಂತರ ಹೋರಾಟದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಉಮರ್ ಫಾರೂಕ್ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಅವರು ನಾವು ನಮ್ಮ ಪಂಡಿತ್ ಸಹೋದರರನ್ನು ಕಣಿವೆಗೆ ಹಿಂತಿರುಗಲು ಯಾವಾಗಲೂ ಆಹ್ವಾನಿಸಿದ್ದೇವೆ” ಎಂದು ಹೇಳಿದ ಅವರುಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿ ಎಂದಿದ್ದಾರೆ

ತನಗೆ ಮಿರ್ವೈಜ್ ಬಿರುದನ್ನು ನೀಡುವ ಕಾಶ್ಮೀರದ ಉನ್ನತ ಪಾದ್ರಿ ಎಂದು ಪ್ರಾರ್ಥನೆ ಕುರಿತು ಪ್ರತಿಕ್ರಿಯಿಸಿದ ಅವರು ಇದೇ ವೇಳೆ ಶಾಂತಿಯನ್ನು ಪ್ರತಿಪಾದಿಸಿದ್ದಾರೆ. 2019ರ ಆಗಸ್ಟ್ 4 ರಂದು ಉಮರ್ ಫಾರೂಕ್ ಬಂಧಿಸಿದ ನಂತರ ಮೊದಲ ಬಾರಿಗೆ ಅವರ ಸಾಮಾನ್ಯ ಧರ್ಮಪೀಠಕ್ಕೆ ಮರಳಿ ಈ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ಅನೇಕರಿಗೆ ಪ್ರಾದೇಶಿಕ ಪ್ರಶ್ನೆಯಾಗಿರಬಹುದು ಆದರೆ ಈ ಪ್ರದೇಶದ ಜನರಿಗೆ ಇದು ಮಾತುಕತೆಯ ಮೂಲಕ ಪರಿಹರಿಸಬೇಕಾದ “ಪ್ರಮುಖ ಮಾನವೀಯ ಸಮಸ್ಯೆ” ಎಂದು ಹೇಳಿದ ಅವರು ಹುರಿಯತ್ ಜಮ್ಮು ಕಾಶ್ಮೀರದ ಭಾಗ. ಒಂದು ಭಾಗ ಭಾರತದಲ್ಲಿದ್ದರೆ ಉಳಿದ ಎರಡು ಪಾಕಿಸ್ತಾನ ಮತ್ತು ಚೀನಾದಲ್ಲಿವೆ, ಮತ್ತು ಅವುಗಳನ್ನು ಸಂಪೂರ್ಣವಾಗಿ ವಿಲೀನಗೊಳಿಸಿ ಜಮ್ಮು ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

“ಇದು ಯುದ್ಧದ ಯುಗವಲ್ಲ” ಎಂಬ ಉಕ್ರೇನ್ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಹುರಿಯತ್ ಮುಖ್ಯಸ್ಥ ಉಮರ್ ಫಾರೂಕ್, ಕಾಶ್ಮೀರದ ಸಂದರ್ಭದಲ್ಲೂ ಎಲ್ಲರೂ ಸಹೋದರರಂತೆ ಇದ್ದಾರೆ ಎಂದು ತಿಳಿಸಿದ್ದಾರೆ.

“ನಾವು ಯಾವಾಗಲೂ ಹಿಂಸಾತ್ಮಕ ವಿಧಾನಗಳಿಗೆ ಪರ್ಯಾಯವಾಗಿ ಸಂವಾದ ಮತ್ತು ಸಮನ್ವಯತೆಯ ಮೂಲಕ ಪರಿಹಾರದ ಪ್ರಯತ್ನಗಳನ್ನು ನಂಬಿದ್ದೇವೆ ಈ ಮಾರ್ಗವನ್ನು ಅನುಸರಿಸಲು ವೈಯಕ್ತಿಕವಾಗಿ ಅನುಭವಿಸಿದ್ದೇವೆ” ಎಂದು ಅವರು ಹೇಳಿದ್ದಾರೆ,.