ಜಮ್ಮಲದಿನ್ನಿ ಕ್ರಾಸ್ ಸೇತುವೆಯಲ್ಲಿ ಶವವಾಗಿ ದೊರೆತ ಯುವತಿಯ ಗುರುತು ಪತ್ತೆ

ವಿಜಯಪುರ, ಜೂ.11-ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಜಮ್ಮಲದಿನ್ನಿ ಕ್ರಾಸ್ ಮುಖ್ಯ ರಸ್ತೆಯ ಸೇತುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಯುವತಿಯ ಗುರುತು ಪತ್ತೆಯಾಗಿದೆ.
ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಅಪ್ರಾಪ್ತ ಯುವತಿಯನ್ನು 17 ವರ್ಷದ ಆರತಿ ಮಲ್ಲಪ್ಪ ಬಿಲ್ಲಾಡ ಎಂದು ಗುರುತಿಸಲಾಗಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕು ನೆಲೋಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಎಂದು ಅಕೆ ಧರಿಸಿದ್ದ ಬಟ್ಟೆ ಆಧಾರದಲ್ಲಿ ಪಾಲಕರು ಗುರುತಿಸಿದ್ದಾರೆ. ಆದರೆ ಯುವತಿ ಈ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಲು ನಿಖರ ಕಾರಣ ಬಹಿರಂಗವಾಗಿಲ್ಲ.
ಈ ಕುರಿತು ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಮುಂದುವರೆದಿದೆ.