ಜಮೀರ್ ಶಾಸಕತ್ವ ವಜಾಕ್ಕೆ ಆಗ್ರಹಿಸಿ ಒಕ್ಕಲಿಗ ಸಂಘಟನೆಯಿಂದ ಪ್ರತಿಭಟನೆ

ನಂಜನಗೂಡು: ಜು.27:- ಶಾಸಕ ಜಮೀರ್ ಅಹ್ಮದ್ ಒಕ್ಕಲಿಗ ಸಮುದಾಯದ ಬಗ್ಗೆ ಮತ್ತು ನಾಯಕರ ವಿರುದ್ಧ ಕುರಿತಂತೆ ಹಲವಾರು ಬಾರಿ ಬಾಯಿಗೆ ಬಂದಂತೆ ಮಾತುಗಳನ್ನು ಆಡುತ್ತಿರುವುದನ್ನು ಖಂಡಿಸಿ ತಾಲೂಕು ಒಕ್ಕಲಿಗ ಸಂಘಟನೆಯು ಹುಲ್ಲ ಹಳ್ಳಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ಜಮೀರ್ ಭಾವಚಿತ್ರಕ್ಕೆ ಬೆಂಕಿ ಹಾಕಿ ಚಪ್ಪಲಿ ಸೇವೆ ಮಾಡಿ ತಮ್ಮ ಅಕ್ರೋಶ ಹೊರ ಹಾಕಿದರು.
ನಗರ ಮತ್ತು ತಾಲೂಕಿನ ಹಲವು ಗ್ರಾಮದಿಂದ ಬಂದ ಮುಖಂಡರು ಮಾನವ ಸರಪಳಿ ಮಾಡಿ ಜಮೀರ್ ವಿರುದ್ಧ ಧಿಕ್ಕಾರ ಕೋಗಿ ಅವರ ಭಾವಚಿತ್ರಕ್ಕೆ ಬೆಂಕಿ ಹಾಕಿ ಪ್ರತಿಪಡಿಸಿದರು.
ಜನಾಂಗದ ಮುಖಂಡ ಕೃಷ್ಣಪ್ಪಗೌಡ ಮತ್ತು ನರಸಿಂಹ ಸ್ವಾಮಿ ಮಾತನಾಡಿ ಜಮೀರ್ ಅಹ್ಮದ್ ಈಗಾಗಲೇ ಜನಾಂಗದ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡುತ್ತಿರುವುದು ಖಂಡಿಸುತ್ತೇವೆ ಇದೇ ರೀತಿ ಮುಂದುವರೆದರೆ ಜನಾಂಗ ಬೀದಿಗಿಳಿದು ಉಗ್ರ ಹೋರಾಟ ಮಾಡಿ ಬುದ್ದಿ ಕಲಿಸಬೇಕಾಗುತ್ತದೆ ಈತನ ಶಾಸಕತ್ವವನ್ನು ವಜಾ ಮಾಡಬೇಕು ಕ್ಷಮೆ ಕೇಳಬೇಕು ಎಂದರು ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಇನ್ನು ಮುಂದೆ ನಮ್ಮ ಸಮುದಾಯದ ಬಗ್ಗೆ ಯಾರೇ ಮಾತನಾಡಿದರು ಪಾಠ ಕಲಿಸುವ ಶಕ್ತಿ ನಮ್ಮ ಸಮುದಾಯಕ್ಕೆ ಇದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಿಟ್ಟಪ್ಪ ಮಂಜುನಾಥ್ ನಾಗರಾಜು ಸಂತೋಷ್ ಕುಮಾರ್ ಪ್ರವೀಣ್ ಕುಮಾರ್ ಶಿವಕುಮಾರ್ ಉಮೇಶ್ ಮಹಾದೇವ ಅವಿನಾಶ್ ಮಧು ಹಾಲು ಸತೀಶ್ ಚೆಲುವರಾಜ್ ಮಣಿ ಪರಮ ಜ್ಯೋತಿ ಡಿಕೆ ರವಿ ಸತೀಶ್ ಗೋವರ್ಧನ್ ಚೆಲುವಪ್ಪ ಶಿವರಾಮು ಎನ್ಕೆ ರವಿಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು