ಜಮೀರ್‍ಖಾನ್‍ಗೆ ಡಿಸಿಎಂ,ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹ

ತಾಳಿಕೋಟೆ :ಮೇ.18: ಮುಂಬರುವ ಕಾಂಗ್ರೆಸ್ ಸರಕಾರದಲ್ಲಿ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಶಾಸಕ ಜಮೀರ್‍ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಕ್ಯಾಬಿನೇಟ್ ದರ್ಜೆಯ ಮಂತ್ರಿ ಸ್ಥಾನ ನೀಡುವಂತೆ ತಾಳಿಕೋಟೆ ಮುಸ್ಲಿಂ ಸಮಾಜದ ಪರವಾಗಿ ಪಕ್ಷದ ವರಿಷ್ಠರಿಗೆ ಒತ್ತಾಯಿಸುತ್ತಿದ್ದೇವೆಂದು ಜಿಲ್ಲಾ ವಕ್ಫ ಸಮಿತಿ ಮಾಜಿ ಉಪಾಧ್ಯಕ್ಷ ಸೈಯದಶಕೀಲಅಹ್ಮದ ಖಾಜಿ ಅವರು ಹೇಳಿದರು.

ಈ ಕುರಿತು ಬುಧವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು 6 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಕಾಂಗ್ರೇಸ್ ಪಕ್ಷದ ಮುಂಚೂಣಿ ನಾಯಕರಾಗಿ ಪಕ್ಷ ಸಂಘಟನೆಗೆ ಶ್ರಮಿಸಿದಂತಹ ವ್ಯಕ್ತಿಯಾಗಿದ್ದಾರೆ ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದಾರೆ ಮತ್ತು ಅನುಭವಿ ರಾಜಕಾರಣಿಯಾಗಿದ್ದಾರೆ ಅವರಿಗೆ ಈ ಭಾರಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ಮಾನ ನೀಡಬೇಕು ಮತ್ತು ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ. ಆದರೆ ಮುಸ್ಲಿಂ ಜನಾಂಗಕ್ಕೆ ಈವರೆಗೂ ಸೂಕ್ತ ಪ್ರಾತಿನಿಧ್ಯ ಹಿಂದಿನವರಿಂದ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಮೀರ್‍ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇವೆಂದರು.

   ಇನ್ನೋರ್ವ ದಿ.ತಾಳಿಕೋಟಿ ಮುಸ್ಲಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಇಬ್ರಾಹಿಂ ಮನ್ಸೂರ ಅವರು ಮಾತನಾಡಿ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಸಜ್ಜನ ರಾಜಕಾರಣಿ, 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾಡಗೌಡರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಚಿವ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸಬೇಕು ಈ ಹಿಂದೆ 1989ರಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ವಿದೆ ಮತ್ತು ಕಳೆದ ಭಾರಿ ಕಾಂಗ್ರೇಸ್ ಸರ್ಕಾರದಲ್ಲಿ ದೇಹಲಿ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ ಸುಮಾರು 40 ವರ್ಷಗಳ ಕಾಲ ಕಾಂಗ್ರೇಸ್ ಪಕ್ಷದಲ್ಲಿ ದುಡಿದಿರುವ ಶಾಸಕ ನಾಡಗೌಡ(ಅಪ್ಪಾಜಿ) ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಮತ್ತು ರಾಜ್ಯದಲ್ಲಿ ಮುಸ್ಲಿಂ ಸಮಾಜವು ಸ್ವಾತಂತ್ರ್ಯದ ನಂತರದಿಂದಲೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದ ಸಮಾಜವಾಗಿದೆ ಆದರೆ ಇಲ್ಲಿಯವರೆಗೆ ಮುಸ್ಲಿಂ ಸಮಾಜದ ಶಾಸಕರಿಗೆ ಯಾವುದೇ ರೀತಿಯ ಸ್ಥಾನ ಮಾನಗಳು ಸಿಕ್ಕಿಲ್ಲಾ ಈ ಭಾರಿಯ ಕಾಂಗ್ರೇಸ್ ಸರ್ಕಾರದಲ್ಲಿ ಜಮೀರ್‍ಅಹ್ಮದ ಖಾನ್ ಅವರಿಗೆ ಉಪಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ ಈ ಕುರಿತು ಮತಕ್ಷೇತ್ರದ ಮುಸ್ಲಿಂ ಮುಖಂಡರುಗಳು ಸೀಘ್ರದಲ್ಲಿಯೇ ನಿಯೋಗದೊಂದಿಗೆ ಕಾಂಗ್ರೇಸ್ ವರಿಷ್ಠರನ್ನು ಬೆಟ್ಟಿಯಾಗಿ ಒತ್ತಾಯಿಸಲಿದ್ದೇವೆಂದರು.

ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಅಬ್ದುಲ್‍ಗನಿಸಾಬ ಲಾಹೋರಿ,ಅಲ್ಪ ಸಂಖ್ಯಾತ ತಾಲೂಕಾ ಅಧ್ಯಕ್ಷ ಶಬ್ಬೀರ ಲಾಹೋರಿ, ಏ.ಡಿ.ಏಕೀನ್, ಅಬ್ದುಲ್‍ಸತ್ತಾರ ಅವಟಿ, ಹಸನಸಾಬ ಮನಗೂಳಿ, ಮಹಿಬೂಬಶಾ ಮಕಾಂದಾರ, ಅಬ್ದುಲ್‍ರಜಾಕ ಮಮದಾಪೂರ, ಹಸನಸಾಬ ಮನಗೂಳಿ, ಸದ್ದಾಂ ಹೊನ್ನುಟಗಿ, ರಫೀಕ್ ಬೇಪಾರಿ, ನಯೀಮ ಮಮದಾಪೂರ, ಖಾಲಿದ ಅವಟಿ, ಮೊದಲಾದವರು ಇದ್ದರು.