ಜಮೀನು ಸರ್ವೆ ಮಾಡಲು ಒತ್ತಾಯ


ಶಿರಹಟ್ಟಿ,ನ29: ಅಕಾಲಿಕ ಮಳೆಯಿಂದ ಶಿರಹಟ್ಟಿ ಸುತ್ತಮುತ್ತಲೂ ಇರುವಂತಹ ಗ್ರಾಮೀಣ ಪ್ರದೇಶಗಳಲ್ಲೂ ಸಹ ಬೆಳೆದಂತಹ ಬೆಳೆಗಳು ಹಾನಿಗೀಡಾಗಿದ್ದು ಇವುಗಳನ್ನು ಸಹ ಸರ್ವೆ ಮಾಡಿ ಪರಿಹಾರ ನೀಡಬೇಕೆಂದು ಶಿರಹಟ್ಟಿಯ ರೈತರು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಯಲ್ಲಪ್ಪಗೌಡ ಪಾಟೀಲ, ಸುರೇಶ ಹವಳದ, ಗ್ರಾಮೀಣ ಪ್ರದೇಶಗಳಲ್ಲಿ ನಿರ್ದಿಷ್ಟ ಬೆಳೆಗಳನ್ನು ಮಾತ್ರ ಸಮೀಕ್ಷೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಆದ್ದರಿಂದ ಶಿರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಅನ್ಯಾಯವಾಗಬಾರದೆನ್ನುವ ದೃಷ್ಟಿಯಿಂದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಭಾಗದ ರೈತರನ್ನು ಸಹ ಪರಿಗಣಿಸಿ ಅಧಿಕಾರಿಗಳು ಜಮೀನುಗಳಿಗೆ ತೆರಳಿ ವಾಸ್ತವ ಸ್ಥಿತಿಯನ್ನು ಅರಿತು ಸರಕಾರಕ್ಕೆ ವರದಿ ನೀಡಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ವಿಎಸ್‍ಎಸ್ ಅಧ್ಯಕ್ಷ ರಾಮಣ್ಣ ಡಂಬಳ, ಜಾನು ಲಮಾಣಿ, ನಿಂಗನವಢ ಪಾಟೀಲ, ಮನೋಜ ದೇಶಪಾಂಡೆ, ಎಚ್.ಎಂ.ದೇವಗಿರಿ, ಶೇಖಪ್ಪ ಶಿರಗೂರ, ವೀರಣ್ಣ ಕೊಡ್ಲಿವಾಡ, ಜಗದೀಶ ಸ್ವಾಮಿ, ಅಶೋಕ ಮಡಿವಾಳರ, ಬಸವಣ್ಣೆಪ್ಪ ತುಳಿ, ಚನ್ನವೀರಪ್ಪ ಕಲ್ಯಾಣಿ ಮುಂತಾದವರು ಉಪಸ್ಥಿತರಿದ್ದರು.