ಜಮೀನು ವಿವಾದ, ಕೋರ್ಟ್ ವಿಚಾರಣೆ ಎದುರಿಸಿ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಹುಣಸೂರು,ನ.03-ಜಮೀನು ವಿವಾದ ಹಿನ್ನಲೆ ಕೋರ್ಟ್ ಕಲಾಪ ಮುಗಿಸಿ ಬರುತ್ತಿದ್ದ ವ್ಯಕ್ತಿ ಮೇಲೆ 7 ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ್(45) ಹಲ್ಲೆಗೊಳಗಾದ ವ್ಯಕ್ತಿ. ಗಂಭೀರ ಸ್ಥಿತಿಯಲ್ಲಿರುವ ವೆಂಕಟೇಶ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಹಿಂದೆ ವೆಂಕಟೇಶ್ ಮೇಲೆ ಇದೇ ವಿಚಾರದಲ್ಲಿ ಎರಡು ಬಾರಿ ಹಲ್ಲೆ ನಡೆದಿದ್ದು, ಇಂದು ಸಹ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಬೈಕ್ ನಲ್ಲಿ ಕಾಡನಕೊಪ್ಪಲು ಗ್ರಾಮಕ್ಕೆ ಬರುತ್ತಿದ್ದ ವೆಂಕಟೇಶ್ ಮೇಲೆ ರಾಜು, ದಿನೇಶ್, ಸಂಜೀವ್, ರಘು, ಅಣ್ಣಯ್ಯ, ಮೋಹನ್ ಹಾಗೂ ರಮೇಶ್ ರವರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ವೆಂಕಟೇಶ್ರನ್ನ ಲಾರಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.