ಜಮೀನು ವಿವಾದಕ್ಕೆ ವಾಸದ ಶೆಡ್ ದ್ವಂಸ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.01: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಂಪೆÇಂದು ವಾಸದ ಶೆಡ್ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ಅಡುಗೆ ಸಾಮಗ್ರಿಗಳು ಮತ್ತು ಪೀಠೋಪಕರಣಗಳನ್ನು ಹೊರಗೆಸೆದು ನಾಶಮಾಡಿ ವಾಸದ ಶೆಡ್ಡನ್ನು ದ್ವಂಸಗೊಳಿಸಿರುವ ಘಟನೆ ತಾಲೂಕಿನ ಕಡಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗೂಡೇಹೊಸಹಳ್ಳಿ ಗ್ರಾಮದ ಜ್ಯೋತಿ ಕೊಂ ಸೋಮಶೇಖರ್ ಎನ್ನುವವರು ಕಡಹೆಮ್ಮಿಗೆ ಗ್ರಾಮದ ಸರ್ವೇ 140 ಕ್ಕೆ ಸೇರಿದ ಸುಮಾರು 1.5 ಎಕರೆ ಸರ್ಕಾರಿ ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಕೃಷಿ ಮಾಡಿ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಸದರಿ ಸರ್ಕಾರಿ ಜಮೀನಿನ ಮಂಜೂರಾತಿಗಾಗಿ ದರಕಾಸ್ತು ಸಮಿತಿಯ ಮುಂದೆ ಅರ್ಜಿ ಹಾಕಿ ಈ ಸಂಬಂಧ ಸರ್ಕಾರಿ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ. ಸದರಿ ಜಮೀನಿನ ಮೇಲೆ ಕಣ್ಣು ಹಾಕಿರುವ ಕೆಲವರು ಗುಂಪುಗೂಡಿ ಜ್ಯೋತಿ ಕುಟುಂಬವನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ವಾಸದ ಶೆಡ್ಡನ್ನು ನಾಶಪಡಿಸಿ ದಾಂದಲೆ ನಡೆಸಿದ್ದಾರೆಂದು ಹೇಳಲಾಗಿದೆ
ಘಟನೆ ಸಂಬಂಧ ಜ್ಯೋತಿ ಅವರು ಕಿಕ್ಕೇರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದು ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಕಡಹೆಮ್ಮಿಗೆ ಗ್ರಾಮದ ಸರ್ವೆ 140 ಜಮೀನಿನಲ್ಲಿ ನಾನು ಹಲವು ದಶಕಗಳಿಂದ ಶೆಡ್ಡು ನಿರ್ಮಿಸಿಕೊಂಡು ವಾಸಿಸುತ್ತಿದ್ದು ಕಳೆದ 03 ತಿಂಗಳ ಹಿಂದೆ ಆಕಸ್ಮಿಕವಾಗಿ ಶೆಡ್ಡು ಸುಟ್ಟುಹೋಗಿತ್ತು. ಆದ ಕಾರಣ ಕಳೆದ 03 ತಿಂಗಳ ಹಿಂದೆ ನಾನು ಸಿಮೆಂಟ್ ಇಟ್ಟಿಗೆ ಬಳಸಿ ಮೇಲ್ಚಾವಣೆಗೆ ಶೀಟು ಹಾಕಿಕೊಂಡು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. ಕಳೆದ ಮೂರು ದಿನಗಳ ಹಿಂದೆ ಅಂದರೆ ಡಿಸಂಬರ್ 29 ರಂದು ಬೆಳಿಗ್ಗೆ 8.30 ರ ಸಮಯದಲ್ಲಿ ಕಡಹೆಮ್ಮಿಗೆ ಗ್ರಾಮದ ಸ್ವಾಮಿ ಮತ್ತು ಅವರ ಪತ್ನಿ ಮಂಜುಳ, ಶಿವರಾಮು ಮತ್ತು ಅವರ ಪತ್ನಿ ಭಾಗ್ಯ ಹಾಗೂ ಯಜಮಾನ್ ಕುಮಾರ ಮತ್ತು ಅವರ ಪತ್ನಿ ಲತಾ ಎನ್ನುವವರು ಗುಂಪುಗೂಡಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ವಾಸಿಸುತ್ತಿರುವ ಜಾಗ ಸರ್ಕಾರಿ ಗೋಮಾಳವಾಗಿದ್ದು ಇದು ನಮಗೆ ಸೇರಬೇಕಾಗಿದೆ ಎಂದು ಹೇಳುತ್ತಾ ದಾಂದಲೆ ನಡೆಸಿ ನನ್ನ ವಾಸದ ಶೆಡ್ಡನ್ನು ಮತ್ತು ಮನೆಯೊಳಗಿದ್ದ ಪೀಠೋಪಕರಣಗಳು, ಆಹಾರ ಸಾಮಗ್ರಿಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ಹೊರಗೆಸದು ನಾಶಪಡಿಸಿದ್ದಾರೆ. ಸದರಿ ದಾಂದಲೆಕೋರರ ವಿರುದ್ದ ಕ್ರಮ ಜರುಗಿಸಿ ರಕ್ಷಣೆ ನಿಡುವಂತೆ ಜ್ಯೋತಿ ಮತ್ತು ಅವರ ಕುಟುಂಬಸ್ಥರು ಕಿಕ್ಕೇರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕ್ರಮಕ್ಕೆ ಒತ್ತಾಯ: ಕಳೆದ 40 ವರ್ಷಗಳಿಂದ ಜ್ಯೋತಿ ಕುಟುಂಬಸ್ಥರು ಸರ್ಕಾರಿ ಗೋಮಾಳದ ಜಮೀನಿನಲ್ಲಿ ಕೃಷಿ ಮಾಡುತ್ತಾ ಹಾಲಿ ಅನುಭವದಲ್ಲಿದ್ದಾರೆ. ಇವರನ್ನು ಒಕ್ಕಲೆಬ್ಬಿಸಿ ಸದರಿ ಭೂಮಿಯನ್ನು ಕಬಳಿಸಲು ಕೆಲವರು ಕಾನೂನನ್ನು ಕೈಗೆತ್ತಿಕೊಂಡು ರೈತ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಘಟನೆಯ ಸಂಬಂಧ ಸಂತ್ರಸ್ಥ ಜ್ಯೋತಿ ಕುಟುಂಬ ಕಿಕ್ಕೇರಿ ಪೆÇಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಆರೋಪಿಗಳನ್ನು ಬಂಧಿಸಿ ಕುಟುಂಬಕ್ಕೆ ರಕ್ಷಣೆ ಕೊಡುವ ಕೆಲಸವನ್ನು ಕಿಕ್ಕೇರಿ ಪೆÇಲೀಸರು ಮಾಡಿಲ್ಲ ಎಂದು ದೂರಿರುವ ತಾಲೂಕು ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಕಾನೂನು ಕೈಗೆತ್ತಿಕೊಂಡು ದಾಂದಲೆ ನಡೆಸಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.