ಜಮೀನುಗಳಿಗೆ ನೀರು ಬಿಡುವಲ್ಲಿ ಶಾಸಕರು, ಅಧಿಕಾರಿಗಳು ವಿಫಲ

ಸಿರವಾರ,ಮಾ.೧೨- ತುಂಗಭದ್ರಾ ಎಡದಂಡೆ ನಾಲೆಯ ೮೯/೨, ೩ ವಿತರಣಾ ನಾಲೆಗೆ ನೀರು ತಲುಪದೆ ಇರುವುದರಿಂದ ಭೂಮಿ ಬಿರುಕು ಬಿಟ್ಟಿದ್ದೂ, ನಾಟಿ ಮಾಡಿದ ಭತ್ತವು ಒಣಗುತ್ತಿವೆ.
ಶಾಸಕರು ಹಾಗೂ ಅಧಿಕಾರಿಗಳು ನೀರು ನೀಡುವಲಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾದ್ಯಕ್ಷ ಅಮರೇಶ ಚಾಗಭಾವಿ ಆರೋಪಿಸಿದರು. ತಾಲೂಕಿನ ಕೆ.ಗುಡದಿನ್ನಿ, ಹಳ್ಳಿಹೊಸೂರು ಕ್ಯಾಂಪ್, ಹಳ್ಳಿಹೊಸೂರು, ಮಾಡಗಿರಿ ಕ್ಯಾಂಪ್ ೮೯/೨ ಅಚ್ಚುಕಟ್ಟು ಪ್ರದೇಶದ ರೈತರ ಸುಮಾರು ೫೦೦ ಕ್ಕೂ ಅಧಿಕ ಜಮೀನುಗಳಲ್ಲಿ ಬಿತ್ತನೆ ಮಾಡಿರುವ ಭತ್ತಕ್ಕೆ ನೀರು ಇಲ್ಲದೆ ಒಣಗಿ ಹೋಗಿರುವುದನ್ನು ವೀಕ್ಷಣೆ ಮಾಡಿ ಮಾತಮಾಡಿದ ಅವರು ತುಂಗಭದ್ರಾ ನಾಲೆಯನ್ನೆ ಅವಲಂಬಿತ ರೈತರಿಗೆ ಕಳೆದ ಒಂದು ತಿಂಗಳಿಂದ ನೀರಿಗೆ ತೊಂದರೆಯಾಗಿದೆ.
ಈ ಭಾಗದ ಅನೇಕ ರೈತರು ಜಮೀನು ಲೀಜ್‌ಗೆ ಪಡೆದು ಭತ್ತ ಬಿತ್ತನೆ ಮಾಡಿದ್ದಾರೆ. ಈಗಾಗಲೇ ೩೦-೪೦ ಪ್ರತಿ ಎಕರೆಗೆ ಖರ್ಚು ಮಾಡಿದ್ದಾರೆ. ಭತ್ತ ಕಾಳು ಕಟ್ಟುವ ಹಂತದಲ್ಲಿವೆ. ಈಗ ನೀರಿ ಅವಶ್ಯಕತೆ ಹೆಚ್ವು ಇದೇ ಆದರೆ ಮೇಲ್ಭಾಗದಲ್ಲಿಯೇ ನಮ್ಮ ನೀರನ್ನು ಬಳಕೆ ಮಾಡಿಕೊಂಡು ನಮಗೆ ನೀರು ಇಲ್ಲದಂತೆ ಮಾಡಲಾಗಿದೆ. ಕೊನೆಭಾಗಕ್ಕೆ ನೀರು ಹರಿಸುವಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಈ ನಾಲೆಗೆ ನೀರು ಹರಿಸಿರುವುದಾಗಿ ಹೇಳುತ್ತಿದ್ದಾರೆ, ಆದರೆ ಬಾರ್ ೨ ಗೆ ನೀರು ಹರಿಸಿದರೆ ಬೆಳೆಗಳು ಒಣಗುತ್ತಿದವೆ. ಶಾಸಕರು ಮುಖ್ಯನಾಲೆಯ ಮೇಲೆ ಒಡಾಡಿ ನೀರು ತಂದಿದೆವೆ ೨ ಬೆಳೆಗೆ ನೀರು ಕೊಟ್ಟಿರುವುದಾಗಿ ಹೇಳಿದಿರಿ, ನೋಡಿ ಸ್ವಾಮಿ ನೀವು ಕೊಟಿರುವ ನೀರಿನಿಂದ ಬೆಳೆಗಳು ಏಷ್ಟು ಚೆನ್ನಾಗಿ ಬಂದಿವೆ ನೋಡಿ. ಕೂಡಲೇ ನೀರು ಹರಿಸಬೇಕು. ಏಪ್ರೀಲ್ ೧೦ ರ ವರೆಗೂ ಈ ನಾಲೆಗೆ ನೀರು ಹರಿಸಬೇಕು. ಇಲ್ಲದಿದರೆ ರೈತರಿಗೆ ಬೆಳೆ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ರಾಮಣ್ಣ ಕೆ.ಗುಡದಿನ್ನಿ, ಶರಣಪ್ಪಚನ್ನಪ್ಪ ಹರವಿ, ಶರಣಪ್ಪ, ಷಣ್ಮುಖ, ಮರೇಶ, ಮಲ್ಲಯ್ಯ ಸೇರಿದಂತೆ ಇನ್ನಿತರ ರೈತರು ಇದ್ದರು.