ಜಮೀನುಗಳಿಗೆ ದಾರಿ ನೀಡಲು ಒತ್ತಾಯಿಸಿ:ರೈತರಿಂದ ಸೋಲಾರ್ ಕಂಪನಿಯ ಪ್ಲಾಂಟ್ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ

ತಾಳಿಕೋಟೆ:ಜ.5: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸುಮಾರು 40 ಕ್ಕೂ ಹೆಚ್ಚು ರೈತರು ತಮ್ಮ ಜಮೀನುಗಳಿಗೆ ಹೋಗಲು ಈ ಮೊದಲು ಇದ್ದ ದಾರಿಯನ್ನು ಪೋರ್ಥ ಪಾರ್ಟನರ ಎನರ್ಜಿ ಪ್ರವ್ಹೇಟ್ ಲಿ, ಕಂಪನಿಯವರು ಬಂದ್ ಮಾಡಿದ್ದಾರೆ ಇದರಿಂದ ಜಮೀನುಗಳಿಗೆ ತೆರಳಲು ದಾರಿ ಇಲ್ಲದೇ ಪರದಾಡುವಂತಾಗಿದೆ ಕೂಡಲೇ ದಾರಿ ಸಮಸ್ಯ ಇತ್ಯರ್ಥ ಪಡಿಸಬೇಕೆಂದು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬುಧವಾರರಂದು ಆರಂಬಿಸಿದ್ದಾರೆ.
ರೈತರ ಹೋರಾಟಕ್ಕೆ ಅಖಂಡ ಕರ್ನಾಟಕ ರೈತ ಹಿತರಕ್ಷಣಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಬೆಟ್ಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು ಪೋರ್ಥ್ ಪಾರ್ಟನರ್ ಎನರ್ಜಿ ಪ್ರೈವ್ಹೇಟ್ ಲಿ, ಕಂಪನಿಯವರು ಈ ಮೋದಲು ಜಮೀನುಗಳಿಗೆ ತಿರುಗಾಡುತ್ತಿದ್ದ ದಾರಿಯನ್ನು ಬಂದ್ ಮಾಡಿದ್ದಾರೆ ಉದ್ದೇಶ ಪೂರ್ವಕವಾಗಿ ಕಂಪನಿಗೆ ಲೀಸ್ ಕೊಟ್ಟ ರೈತರಿಗೆ ಪೊಸಲಾಯಿಸಿ ದಾರಿ ಬಂದ್ ಮಾಡಿದ್ದಾರೆ ಇದರಿಂದ ಸುಮಾರು 36 ರೈತರ ಜಮೀನುಗಳಿಗೆ ಹೋಗಲು ತುಂಬಾ ತೊಂದರೆಯಾಗಿದೆ ಜಮೀನುಗಳಲ್ಲಿ ಬಿತ್ತನೆ ಮಾಡಲಾದ ತೋಗರಿ ಬೆಳೆ, ಕಡಲೆ ಬೆಳೆ ಕಟಾವಿಗೆ ಬಂದಿದೆ ಇದರ ರಾಶಿ ಮಾಡಲು ರೈತರಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ ಬೆಳೆಗಳೆಲ್ಲವೂ ಹಾಳಾಗಲಿಕ್ಕೆ ಹತ್ತಿದೆ ಲೀಜ್ ಪಡೆದು ಕೊಂಡ ಪಂಪನಿಗೆ ರೈತರ ಜಮೀನುಗಳಿಗೆ ತೆರಳುವ ದಾರಿ ಬಂದ್ ಮಾಡುವ ಅಧಿಕಾರವಿಲ್ಲಾ ಇದೇ ದಾರಿಯನ್ನೇ ಅವಲಂಬಿಸಿಕೊಂಡು ಹೋಗುತ್ತಿದ್ದ ರೈತರಿಗೆ ಸದ್ಯ ಸಂಕಷ್ಟ ಬಂದೋದಗಿದೆ ಸೋಲಾರ್ ಕಂಪನಿ ಮತ್ತು ಇನ್ನಿತರ ಯಾವುದೇ ಕಾರ್ಖಾನೆಗಳನ್ನು ಪ್ರಾರಂಬಿಸಬೇಕಾದರೆ ಬರಡು ಭೂಮಿಯಲ್ಲಿ ಪ್ರಾರಂಬಿಸಬೇಕು ಉತ್ತಮ ಫಲವತ್ತಾದ ಭೂಮಿಯನ್ನು ರೈತರಿಂದ ಪೋಸಲಾಯಿಸಿ ಪಡೆದುಕೊಂಡು ಇನ್ನಿತರ ಸುತ್ತಮುತ್ತಲಿನ ರೈತರಿಗೆ ತೊಂದರೆ ಕೊಡುವ ಉದ್ದೇಶ ಇದರಲ್ಲಿ ಹೊಂದಿರುವದು ಎದ್ದು ಕಾಣುತ್ತಿದೆ ಕಾನೂನು ಭಾಹೀರವಾಗಿ ಸ್ಥಾಪಿಸಿರುವ ಸೋಲಾರ ಕಂಪನಿಯನ್ನು ಕೂಡಲೇ ಜಿಲ್ಲಾಧಿಕಾರಿಗಳು ತೆರವುಗೊಳಿಸಲು ಆದೇಶಿಸಬೇಕೆಂದು ಒತ್ತಾಯಿಸಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರೈತರಾದ ಜಗನ್ನಾಥ ಮಸರಕಲ್ಲ, ಸುರೇಶ ಬಾಬು ತಂಗಡಗಿ, ಪರಶುರಾಮ ಕದ್ನಳ್ಳಿ, ರಾಘವೇಂದ್ರ ಬಿಜಾಪೂರ, ಅಶ್ವಿನಕುಮಾರ ಬೇದರಕರ, ಋಷಿಕೇಶ ಗೊಟಗುಣಕಿ, ದೇವರಾಜ್ ನಾಯಕಲ್ಲ, ರಾಜಶೇಖರ ಹಡಪದ, ಮಲ್ಲಣ್ಣ ಸಿಂಗನಹಳ್ಳಿ, ಮಾಳಪ್ಪ ಮಾಗಣಗೇರಿ, ಬಸಪ್ಪ ತಂಗಡಗಿ, ಮನೋಹರ ಕಟ್ಟಿಮನಿ, ಸಾಯಬಣ್ಣ ಕದ್ದೇನಹಳ್ಳಿ, ವಿರೇಶ ಬಿದರಕುಂದಿ, ಬಸ್ಸು ಕಲ್ಬುರ್ಗಿ, ಶಿವಾನಂದ ದೊಡಮನಿ, ದೇವೇಂದ್ರ ಚಲವಾದಿ, ಎಸ್.ಎಸ್.ಗೊಟಗುಂಡಕಿ, ಮಲ್ಲಣ್ಣ ಪತ್ತೇಪೂರ, ನಿಂಗನಗೌಡ ಹೆಮ್ಮಡಗಿ, ಕಮಲಾಬಾಯಿ ಮಸರಕಲ್ಲ, ಇಂದಿರಾಬಾಯಿ ಮಸರಕಲ್ಲ, ಲಕ್ಷ್ಮೀಬಾಯಿ ಮಸರಕಲ್ಲ, ಮೊದಲಾದವರು ಇದ್ದರು.
ತಹಶಿಲ್ದಾರ/ಪಿ.ಎಸ್.ಆಯ್. ಬೆಟ್ಟಿ
ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಾಲೂಕಾ ತಹಶಿಲ್ದಾರ ಶ್ರೀಧರ ಗೋಟೂರ ಹಾಗೂ ಪಿ.ಎಸ್.ಆಯ್. ಸುರೇಶ ಮಂಟೂರ ಅವರು ಬೆಟ್ಟಿ ನೀಡಿ ಸೋಲಾರ ಕಂಪನಿಯ ಇಂಜನಿಯರೊಂದಿಗೆ ಮಾತುಕತೆ ನಡೆಸಿದರಲ್ಲದೇ ನ್ಯಾಯಾಲಯದಿಂದ ಈಗಾಗಲೇ ರೈತರೊಬ್ಬರು ತಡೆಯಾಜ್ಞೆ ತಂದಿದ್ದು ನ್ಯಾಯಾಲಯದ ಆದೇಶದಂತೆ ತಾತ್ಕಾಲಿಕವಾಗಿ ಕೂಡಲೇ ರಸ್ತೆ ವ್ಯವಸ್ಥೆ ಮಾಡಿಕೊಡಲು ಸೂಚಿಸಿದರು ಇದಕ್ಕೆ ಪ್ರತಿಕ್ರೀಯಿಸಿದ ಇಂಜನಿಯರ ಅವರು ನ್ಯಾಯಾಲಯದಲ್ಲಿ ಹೇರಿಂಗ್ ಇದೆ ನ್ಯಾಯಾಲಯದ ಆದೇಶವಾದರೆ ದಾರಿ ನೀಡುತ್ತೇವೆ ಅಥವಾ ಲೀಜ್ ಕೊಟ್ಟ ರೈತರು ದಾರಿ ಕೊಡಲು ಬರೆದುಕೊಟ್ಟರೆ ದಾರಿ ನೀಡುತ್ತೇವೆ ಸರ್ಕಾರದ ನಕಾಶೆಯಲ್ಲಿ ಯಾವುದೇ ರೀತಿಯ ಇಲ್ಲಿ ದಾರಿ ಇಲ್ಲಾ ದಾಖಲಾತಿಯನ್ನು ಪರಿಶೀಲಿಸಿ ಎಂದಾಗ ಸೋಲಾರ ಕಂಪನಿಯ ಎಂಡಿ ಅವರೊಂದಿಗೆ ತಹಶಿಲ್ದಾರ ಗೋಟೂರ ಅವರು ದೂರವಾಣಿಯೊಂದಿಗೆ ಮಾತನಾಡಿ ಕೂಡಲೇ ರೈತರೊಂದಿಗೆ ಮಾತುಕತೆಗೆ ಬರಲು ತಿಳಿಸಿದರಲ್ಲದೇ ಕೂಡಲೇ ದಾರಿ ಸಮಸ್ಯ ಇತ್ಯರ್ಥ ಪಡಿಸಿಕೊಡುವದಾಗಿ ರೈತರಿಗೆ ಬರವಸೆ ನೀಡಿ ತೆರಳಿದರು.