ಜಮೀನಿನ ಶೆಡ್‍ನಲ್ಲಿ ಇರಿಸಿದ್ದ 26 ಸಾವಿರ ರೂ.ಮೌಲ್ಯದ ವಸ್ತು ಕಳವು

ಕಲಬುರಗಿ,ಅ.16-ನಗರ ಹೊರವಲಯದ ತಾವರಗೇರಾ ಸೀಮಾಂತರದಲ್ಲಿರುವ ಜಮೀನಿನ ಶೆಡ್‍ನಲ್ಲಿ ಇರಿಸಲಾಗಿದ್ದ 26 ಸಾವಿರ ರೂ.ಮೌಲ್ಯದ ವಸ್ತುಗಳು ಕಳವಾದ ಘಟನೆ ನಡೆದಿದೆ.
ಶಾಂತಿ ನಗರದ ವಿಠ್ಠಲ ಜಾಧವ್ ಎಂಬುವವರ ಜಮೀನಿನ ಶೆಡ್‍ನಲ್ಲಿ ಇರಿಸಲಾಗಿದ್ದ 10 ಸಾವಿರ ರೂ.ಮೌಲ್ಯದ 5 ಹೆಚ್.ಪಿ.ಮೋಟಾರ್, 10 ಸಾವಿರ ರೂ.ಮೌಲ್ಯದ ಸ್ಪ್ರಿಂಕ್ಲರ್ ಮಶೀನ್, 1000 ರೂ.ಮೌಲ್ಯದ 100 ಫೀಟ್ ಕೇಬಲ್ ವಾಯರ್ ಮತ್ತು 5 ಸಾವಿರ ರೂ.ಮೌಲ್ಯದ ಬ್ಯಾಟರಿ ಕಳವಾಗಿವೆ.
ಈ ಸಂಬಂಧ ವಿಠ್ಠಲ ಜಾಧವ್ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.