ಜಮೀನಿನ ಖಾತೆ ಬದಲಾವಣೆಗೆ 20 ಸಾವಿರ ಕೇಳಿದ ಬೆಣಕಲ್ಲು ವಿಎ ಲೋಕಾಯುಕ್ತ ಬಲೆಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.14: ತಾಲೂಕಿನ ಬೆಣಕಲ್ಲು ಗ್ರಾಮದ ಕಡದೂರು ಮಾರಪ್ಪ ಅವರಿಂದ ಲಂಚ ಪಡೆಯುತ್ತಿದ್ದ ಗ್ರಾಮದ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತರು ಹಣ ಸಮೇತ ನಿನ್ನೆ ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸರ್ವೆ ನಂ.67/ಬಿ ವಿಸ್ತೀರ್ಣ 8 ಎಕರೆ 7 ಸೆಂಟ್ ಜಮೀನು ಅವರ ತಂದೆ ಮೃತಪಟ್ಟ ಬಳಿಕ  ತಾಯಿ  ಕಡದೂರು ಸತ್ಯಮ್ಮ ಇವರ ಹೆಸರಿನಲ್ಲಿದ್ದು. ಆ  ಜಮೀನನ್ನು  ತಮ್ಮಂದಿರು ಮತ್ತು ತಮ್ಮ ಹೆಸರಿಗೆ ದಾನಪತ್ರದ ಮೂಲಕ ಪಾಲು ವಿಭಾಗ ಮಾಡಿಕೊಳ್ಳಲು ನಗರದ  ತಾಲೂಕು ಕಚೇರಿಯ ಗ್ರಾಮಲೆಕ್ಕಿಗರ ಕಛೇರಿಯಲ್ಲಿ  ಗ್ರಾಮಲೆಕ್ಕಾಧಿಕಾರಿ  ಗಿರಿಯಪ್ಪ ಅವರು ಜಮೀನಿನ ಹಕ್ಕು ಬದಲಾವಣೆ ಮಾಡಿಕೊಡಲು. 20 ಸಾವಿರ ರೂ ಲಂಚ ನೀಡಲು ಕೇಳಿದ್ದರು.
ನಿನ್ನೆ  ಕಡದೂರು ಮಾರಪ್ಪ ಇವರಿಂದ  ಗ್ರಾಮಲೆಕ್ಕಿಗ ಗಿರಿಯಪ್ಪ ಲಂಚದ ಹಣ 20 ಸಾವಿರ  ಪಡೆಯುತ್ತಿರುವಾಗ  ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಗಿರಿಯಪ್ಪ ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.