ಜಮೀನಿನಲ್ಲಿ ಲಾರಿ ಹರಿದು ಇಬ್ಬರ ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ತಾಲೂಕಿನ  ಏತ್ತಿನಬೂದಿಹಾಳು ಹತ್ತಿರದ  ಬೆಂಚಿ ಕೊಟ್ಟಲ ಗ್ರಾಮದ ಜಮೀನಿನಲ್ಲಿ ಲಾರಿ ಹರಿದು ಇಬ್ಬರು ಕುರಿಗಾರರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಬ್ಬುನ್ನು ಸಾಗಾಟ ಮಾಡುವ ಲಾರಿ ಲೋಡ್ ಮಾಡುವ ಸಮಯದಲ್ಲಿ ಅದರ ಹಿಂದೆ  ಮಲಗಿದ್ದ  ಚಿತ್ರದುರ್ಗ ಜಿಲ್ಲೆಯ ಮೋಳಕಾಲ್ಮುರು ತಾಲ್ಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51) ಎರಿಸ್ವಾಮಿ (20) ಸಾವನ್ನಪ್ಪಿದ್ದಾರೆ.
ಇವರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ನಿಲ್ಲಿಸಿ ಮಲಿಗಿದ್ದಾಗ. ಶನಿವಾರ ಬೆಳಗಿನ ಜಾವ 4.ಗಂಟೆ ಸಮಯದಲ್ಲಿ ಕಬ್ಬು ಲೋಡ್ ಮಾಡಿಕೊಳ್ಳತ್ತಾ ರಿವರ್ಸ್ ಬಂದ ಸಮಯದಲ್ಲಿ, ಇವರ ಮೇಲೆ ಲಾರಿ ಹರಿದಿದೆ.
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.