ಜಮೀನಿನಲ್ಲಿ ನಿರ್ಮಿಸಿದ ಪತ್ರಾಸ ಮನೆ ಮಳೆಯಿಂದ ಹಾನಿ: ಪರಿಹಾರಕ್ಕಾಗಿ ಮನವಿ

ತಿಕೋಟಾ, ಮೇ.30-ಇಲ್ಲಿಯ ಶ್ರೀಮತಿ ಯಲ್ಲವ್ವ ಭೀರಪ್ಪ (ಪಿಂಟು) ಸೇಜಾಳೆ ಇವರ ಜಮೀನಿನಲ್ಲಿ ಇತ್ತಿಚೆಗೆ ನಿರ್ಮಿಸಿದ ಪತ್ರಾಸ ಮನೆ ದಿ. 28 ರಂದು ಸಂಜೆ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾಳಾಗಿದೆ.
673/5 ಸ.ನಂ. ಇರುವ ಜಮೀನಿನಲ್ಲಿ ಹೂವು ಬೆಳೆ ಮಾಡಿದ 4 ಎಕರೆ ಜಮೀನಿನಲ್ಲಿ ಭಾರಿ ಮಳೆ ಹಾಗೂ ಗಾಳಿಗೆ ಪತ್ರಾಸಗಳು ಸುಮಾರು 100ರಿಂದ 200 ಮೀಟರ ದೂರದಲ್ಲಿ ಬಂದು ಬಿದ್ದಿವೆ.
ಬಡತನದಲ್ಲಿರುವ ಈ ಕುಟುಂಬ ಸಾಲ ಮಾಡಿ ಸುಮಾರು 1.5 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ಈ ಮನೆಯಲ್ಲಿಯೇ ವಾಸವಾಗಿದ್ದರು. ಮಳೆ, ಗಾಳಿ, ಹೆಚ್ಚಾದಾಗ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
ಪತಿ, ಮೂರು ಮಕ್ಕಳನ್ನು ಹೊಂದಿದ ಈ ಮಹಿಳೆಗೆ ಈಗ ಬಯಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. ಹಾಗೂ ಎರಡು ಆಡುಗಳಿಗೆ ಪತ್ತಾಸ ಬಡಿದು ಜೀವ ಹೋಗುವ ಸ್ಥಿತಿಯಲ್ಲಿವೆ.
ಈ ಕುರಿತು ತಿಕೋಟಾ ಪಟ್ಟಣ ಪಂಚಾಯತದಲ್ಲಿ ಅರ್ಜಿ ಸಲ್ಲಿಸಿದ್ದು ಪರಿಹಾರದ ನಿರೀಕ್ಷೆಯಲ್ಲಿರುವ ಈ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂಬುದು ಅವರ ಆಗ್ರಹವಾಗಿದೆ.