ಜಮೀನಿನಲ್ಲಿದ್ದ ಅಕ್ರಮ ಕಲ್ಲುಗಣಿಗಾರಿಕೆಯ ಕಲ್ಲುಗಳ ವಶ

ಬೆಟ್ಟದಪುರ:ಏ:08: ಸಮೀಪದ ಅಂಬ್ಲಾರೆ ಗ್ರಾಮದ ಜಮೀನಿನೊಂದರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಿ ಕಟ್ಟಡದ ಕಲ್ಲು ಹಾಗೂ ಬೋಡ್ರಸ್ ಕಲ್ಲು ಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಮಂಜು ಚನ್ನಕೇಶವಪುರ ಗ್ರಾಮದವರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.ಮಾಹಿತಿ ತಿಳಿದ ಪೆÇಲೀಸರು ಭಾನುವಾರ ರಾತ್ರಿ 12 ಗಂಟೆಯ ಸಮಯದಲ್ಲಿ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿ ಮಂಜು ಕಟ್ಟಡದ ಕಲ್ಲು ಹಾಗೂ ಬೋಡ್ರಸ್ ಕಲ್ಲು ಗಳನ್ನು ಟ್ರ್ಯಾಕ್ಟರ್ ಗೆ ತುಂಬುತ್ತಿದ್ದ ಸಮಯದಲ್ಲಿ ಪೆÇಲೀಸರು ದಾಳಿ ನಡೆಸಿ ಆರೋಪಿಯನ್ನು ಪರಾರಿಯಾಗಿದ್ದು, ಟ್ರ್ಯಾಕ್ಟರ್ ಮತ್ತು ಕಟ್ಟಡದ ಕಲ್ಲು ಬೋಡ್ರಸ್ ಕಲ್ಲು ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ ಐ ಮಹೇಶ್ ಕುಮಾರ್ ಬಿ.ಕೆ, ಎ ಎಸ್ ಐ ಸೋಮಶೇಖರ್, ಸಿಬ್ಬಂದಿ ಮಂಜುನಾಥ್, ಗಣೇಶ್, ದಿಲೀಪ್ ಇತರರು ಇದ್ದರು.