ಜಮೀನಿಗೆ ನುಗ್ಗಿದ ಹಸುಗಳ ಮೇಲೆ ಟಿಬೇಟಿಯನ್ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

ಸಂಜೆವಾಣಿ ವಾರ್ತೆ
ಹನೂರು ಫೆ 29 :- ಟಿಬೇಟಿಯನ್ ವ್ಯಕ್ತಿಯೊಬ್ಬರು ತಮ್ಮ ಜಮೀನಿನಲ್ಲಿ ಬಂದ ಹಸುಗಳನ್ನು ಮಚ್ಚಿನಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಿರಿಯಂಬಲ ಗ್ರಾಮದ ಸಮೀಪ ನಡೆದಿದೆ.
ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೇಟಿಯನ್ ಕ್ಯಾಂಪ್ ‘ಡಿ’ ವಿಲೇಜ್ ನಿವಾಸಿ ತಂಜಿ ಕೇಟು ಎಂಬ ಟಿಬೆಟ್ ವ್ಯಕ್ತಿಯು ಮೂರ್ನಾಲ್ಕು ಹಸುಗಳನ್ನು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಗುಂಡಿಮಾಳ ಗ್ರಾಮದ ನಿವಾಸಿಗಳಾದ ಬಸವರಾಜು, ರಘು, ಸಿದ್ದಪ್ಪ ಎಂಬುವರಿಗೆ ಸೇರಿದ
ಸುಮಾರು 15ಕು ಹೆಚ್ಚು ದನಗಳಿಗೆ. ಮಚ್ಚಿನಲ್ಲಿ ಕತ್ತರಿಸಿದ್ದಾರೆ. ತೀರ್ವ ಗಾಯಗೊಂಡ ಮೂರು ದನಗಳು. ಜಮೀನಿನಲ್ಲಿ ಬಿದ್ದಿವೆ. ಕಾಲುಗಳನ್ನು ಕತ್ತರಿಸಿ ತೀವ್ರ ಗಾಯಗಳಾಗಿವೆ.
ಹಸುಗಳ ಮಾಲೀಕರ ಕಣ್ಣೀರಿನ ನೋವು:
ಆಕಸ್ಮಿಕವಾಗಿ ಜಮೀನುಗಳಿಗೆ ನುಗ್ಗಿ ಮೇಲು ಬಂದ ಹಸುಗಳನ್ನು ಟಿಬೆಟಿಯನ್ ವ್ಯಕ್ತಿಯು ಮಚ್ಚಿನಿಂದ ಹಲ್ಲೆ ಮಾಡಿ ತೀವ್ರ ಗಾಯ ಮಾಡಿರುವುದನ್ನು ಕಂಡು ಮಾಲೀಕರು ಮನನೊಂದು ಕಣ್ಣೀರು ಹಾಕಿ ವಂತ ಹೃದಯವಿದ್ರಾವಕ ಘಟನೆ ಎಲ್ಲರ ಮನಕಲುಕುವಂತಿತ್ತು.
ಜಮೀನನಲ್ಲಿ ಮೇವು ಮೇಯಲು ಹೋದ ಹಸು ದನಗಳಿಗೆ ಮಾನವೀಯತೆಯನ್ನು ನೋಡದೆ ಟಿಬಿಟಿಯನ್ ವ್ಯಕ್ತಿಯು ಹಸುವಿನ ಕಾಲು ಮತ್ತು ಹೊಟ್ಟೆ ಭಾಗಕ್ಕೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ರಾಸುಗಳ ಕುಟುಂಬದವರು ಸ್ಥಳಕ್ಕೆ ತೆರಳಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀನಿನಲ್ಲಿ ಮೇಲು ಬಂದ ಹಸುಗಳನ್ನು ಮಚ್ಚಿನಲ್ಲಿ ಹಲ್ಲೆ ಮಾಡಿರುವಂತಹ ಘಟನೆ ಇದುವರೆಗೂ ಎಲ್ಲಿಯೂ ನಡೆದಿಲ್ಲ. ಮೂಕ ಪ್ರಾಣಿಯ ನೋವಿನ ರೋಧನೆಯನ್ನು ಯಾರು ತಿಳಿಯಬಲ್ಲರು. ಮೂಕ ಪ್ರಾಣಿಯನ್ನು ಮಚ್ಚಿನಿಂದ ಹಲ್ಲೆ ಮಾಡಿರುವಂತಹ ಟಿಬೆಟಿಯನ್ನು ವ್ಯಕ್ತಿಯನ್ನು ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡಬೇಕೆಂಬುದು ಸ್ಥಳೀಯರ ಆಗ್ರಹಿಸಿದ್ದಾರೆ.