ಜಮೀನಿಗಾಗಿ ಫಲಾನುಭವಿಗಳ ಹೋರಾಟ

ದಾವಣಗೆರೆ.ಜ.೫; ಆಶ್ರಯ ಯೋಜನೆಯಡಿ ನೀಡಿದ ಜಮೀನಿಗೆ ಸರ್ಕಾರದ ಅನುದಾನ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ 3  ಮತ್ತು 4 ಚಕ್ರ ಗೂಡ್ಸ್ ವಾಹನದ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಫಲಾನುಭವಿಗಳೊಂದಿಗೆಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ಮನವಿ ಸಲ್ಲಿಸಿದರು. ಕಕ್ಕರಗೊಳ್ಳ ಮತ್ತು ಆವರಗೊಳ್ಳ ನಡುವೆ ಇರುವ ಜಮೀನಿನ ಮಾಲೀಕರೊಂದಿಗೆ ನಮಗೆ ನೀಡಿದ ಜಾಗದ ಬಗ್ಗೆ ಈ ಹಿಂದೆಯೇ ಇದ್ದ ಜಿಲ್ಲಾಧಿಕಾರಿ ರಮೇಶ್ ಅವರೊಂದಿಗೆ ಮಾತುಕತೆ ನಡೆಸಲಾಗಿತ್ತು.ಆಶ್ರಯ ಯೋಜನೆಯಡಿ ಸೂರು ನಿರ್ಮಿಸಲು ಜಮೀನು ಖರೀದಿಯ ಪ್ರಕ್ರಿಯೆ ಕೂಡ ನಡೆದಿತ್ತು ಆದರೆ ಇದೀಗ ಜಮೀನಿನ ಬೆಲೆ ಹೆಚ್ಚಾಗಿದೆ ಎಂಬ ಕಾರಣ ಹೇಳಲಾಗುತ್ತಿದೆ.  ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕು.ಸರ್ಕಾರ ಜಮೀನ ಮಾಲೀಕರೆ ಸರ್ಕಾರ ನೀಡುವ ಅನುದಾನದ ಬಗ್ಗೆ ತಿಳಿಸಬೇಕು. ಉಳಿದ ಹಣವನ್ನು  ಪಾವತಿ ಮಾಡಲಾಗುವುದು.ಆದ್ದರಿಂದ ಈ ಜಮೀನಿಗೆ ಸರ್ಕಾರದ ಅನುದಾನ ಸಹ ನೀಡಬೇಕು.ಸೂರು ನಿರ್ಮಿಸದಿದ್ದರೂ ಸರಿ ಜಾಗ ನೀಡಬೇಕು.ಸಾರ್ವಜನಿಕರು ಪಾವತಿಸುವ ಹಣವನ್ನು ಡಿಡಿ ಅಥವಾ ಚೆಕ್ ಮೂಲಕ ನೀಡಲಾಗುವುದು ಆದ್ದರಿಂದ ಸರ್ಕಾರದ ಸವಲತ್ತುಗಳನ್ನು ಜಮೀನಿಗೆ ನೀಡಬೇಕು ಎಂದರು.ಜಿಲ್ಲಾಧಿಕಾರಿಗಳು ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.