ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ…

ನಟ ಡಾಲಿ ಧನಂಜಯ “ಜಮಾಲಿಗುಡ್ಡ”ದಲ್ಲಿ ತನ್ನ ಅಡ್ಡ ಮಾಡಿಕೊಂಡಿದ್ದಾರೆ. ಅರೆ ಯಾಕೆ ಅನ್ನುತ್ತೀರಾ.. ಧನಂಜಯ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಒನ್ಸ್ ಅಪಾನ್ ಎ ಟೈಮ್ ಇನ್ ” ಜಮಾಲಿ ಗುಡ್ಡ”.
ಚಿತ್ರವನ್ನು ಸದ್ದಿಲ್ಲದೆ ಸಕಲೇಶಪುರ, ಕುದುರೆ ಮುಖ ಸೇರಿದಂತೆ ಹಲವು ಕಡೆ ಹೆಚ್ಚುಕಡಿಮೆ ಅರ್ಧದಷ್ಟು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬಂದಿರುವ ಚಿತ್ರತಂಡ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿತು.
ಜಮಾಲಿಗುಡ್ಡ, ಪ್ರೀತಿ ಪ್ರೇಮದ ಕಥೆಯೇ ಅಥವಾ, ಲವ್ ಸಬ್ಜೆಕ್ಟ್ , ಥ್ರಿಲ್ಲರ್ ಕಥೆಯೇ ಎನ್ನುವುದು ಕುತೂಹಲದ ಸಂಗತಿ ಎನ್ನುತ್ತಿದೆ ಚಿತ್ರತಂಡ. ಶ್ರೀಹರಿ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದು ಕುಶಾಲ್ ಗೌಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ವೇಳೆ ಮಾತಿಗಿಳಿದ ನಿರ್ದೇಶಕ ಕುಶಾಲ್ ಗೌಡ, ಸಿನಿಮಾ ಕಥೆ ಬೇರೆಯೇ ತರವಾಗಿರುತ್ತದೆ.ಕಾಲಘಟ್ಟದಲ್ಲಿ ನಡೆಯುವ ಕಥೆ. ಈಗಾಗಲೇ ಶೇ ೪೦ ರಷ್ಟು ಚಿತ್ರೀಕರಣ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಕಥೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದರು.
ನಟ ಧನಂಜಯ, ಕಥೆ ಚೆನ್ನಾಗಿತ್ತು. ಮಳೆ ವಾತಾವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ.ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಚೆನ್ನಾಗಿದೆ ಎಲ್ಲರ ಸಹಕಾರ ಪ್ರೊತ್ಸಾಹ ಎಂದಿನಂತೆ ಇರಲಿ ಎಂದು ಕೇಳಿಕೊಂಡರು
ನಟಿ ಅದಿತಿ ಪ್ರಭುದೇವ, ಒಳ್ಳೆಯ ಪಾತ್ರ ಸಿಕ್ಕಿದೆ. ನಾಯಕಿಯಾಗಿ ನಟಿಸುತ್ತಿರುವುದೇ ಖುಷಿಯ ಸಂಗತಿ ಎಂದು ಚುಟುಕಾಗಿ ಮಾತಿಗೆ ವಿರಾಮ ಹಾಕಿದರು. ಹಿರಿಯ ನಟಿ ಭಾವನಾ ರಾಮಣ್ಣ, ಬಹಳ ದಿನಗಳ ನಂತರ ಚಿತ್ರದಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ.ವಿಶೇಷ ಪಾತ್ರವಿದೆ. ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು.
ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ, ಚಿತ್ರ ಒಪ್ಪಿಕೊಳ್ಳಲು ಪಾತ್ರ ಕಾರಣ. ನಿರ್ದೇಶಕರು ಹೇಳಿದ ಕಥೆಯ ಸಾರ ಇಷ್ಟವಾಯಿತು ಎನ್ನುವ ವಿವರ ನೀಡಿದರು. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದು, ನಂದ, ಸತ್ಯಣ್ಣ, ತ್ರಿವೇಣಿ, ಬೇಬಿ ಪ್ರಣ್ಯ, ದಿವ್ಯಾ ಮತ್ತಿತರ ಕಲಾವಿದರು ಇದ್ದಾರೆ. ಕಾರ್ತಿಕ್ ಕ್ಯಾಮರ ಮತ್ತು ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.