ಜಮಾತ್ ನಾಯಕ ಸಿರಾಜುಲ್ ಪಾರು

ಬಲೂಚಿಸ್ತಾನ, ಮೇ ೨೦ -ಪಾಕಿಸ್ತಾನದ ಇಸ್ಲಾಮಿಸ್ಟ್ ರಾಜಕೀಯ ಪಕ್ಷ ಜಮಾತ್-ಇ-ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಕ್ ಅವರು ಆತ್ಮಾಹುತಿ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ,
ದಾಳಿಯಲ್ಲಿ ಕನಿಷ್ಠ ೭ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಬಲೂಚಿಸ್ತಾನದ ಝೋಬ್‌ನಲ್ಲಿ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಹತ್ಯಾ ದಾಳಿ ಬಳಿಕ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಕ್
ನಾನು ಸಾವಿಗೆ ಹೆದರುವುದಿಲ್ಲ, ನನ್ನ ಜೀವನ ಮತ್ತು ಸಾವಿನ ನಿರ್ಧಾರ ಅಲ್ಲಾನ ಮೇಲಿದೆ”ಎಂದು ಹೇಳಿದ್ದಾರೆ.
ಆತ್ಮಾಹುತಿ ಬಾಂಬರ್ ತನ್ನ ವಾಹನದ ಹೊರಗೆ ತಕ್ಷಣವೇ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ, ಬುಲೆಟ್ ಪ್ರೂಫ್ ವಾಹನದೊಳಗೆ ಇದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.
ದೇಶದ ನಿರಂತರ ಹಣದುಬ್ಬರ ಮತ್ತು ಕಳಪೆ ಆರ್ಥಿಕ ಸ್ಥಿತಿಗೆ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ “ಸ್ವಯಂ ಸೇವಾ ಗುಂಪು ದೇಶವನ್ನು ಒತ್ತೆಯಾಳಾಗಿ ತೆಗೆದುಕೊಂಡಿದೆ” ಎಂದು ದೂರಿದ್ದಾರೆ.
ಘಟನೆಯಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ ಎಂದು ಜೆಐ ವಕ್ತಾರ ಖೈಸರ್ ಷರೀಫ್ ಖಚಿತಪಡಿಸಿದ್ದಾರೆ. ರಾಜಕೀಯ ವ್ಯಕ್ತಿಯೊಬ್ಬನ ಮೇಲೆ ಇತ್ತೀಚಿನ ದಾಳಿ ದೇಶ ಭಯೋತ್ಪಾದನೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಆತ್ಮಹತ್ಯಾ ದಾಳಿ ಖಂಡಿಸಿದ್ದಾರೆ ಮತ್ತು ದಾಳಿಯ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಪರಾಧಿಗಳನ್ನು ನ್ಯಾಯಕ್ಕೆ ತನ್ನಿ ಬಲೂಚಿಸ್ತಾನ್ ಸರ್ಕಾರಕ್ಕೆ ಸೂಚಿಸಿದ್ದಾರೆ.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಕೂಡ ಆತ್ಮಹತ್ಯಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರ ಜೊತೆಗೆ ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುದ್ದೂಸ್ ಬಿಜೆಂಜೊ ಕೂಡ ಘಟನೆ ಖಂಡಿಸಿದ್ದಾರೆ ಮತ್ತು ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ.