ಜಮಗಾ(ಜೆ)- ಮಾದನಹಿಪ್ಪರ್ಗಾ ರಸ್ತೆಗೆ 2.75 ಕೋಟಿ: ಶಾಸಕ ಸುಭಾಷ ಆರ್ ಗುತ್ತೇದಾರ

ಕಲಬುರಗಿ:ಜು.17:ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಾಲೂಕಿನಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಶುಕ್ರವಾರ ಜಮಗಾ(ಜೆ) ಗ್ರಾಮದ ಹತ್ತಿರ ಲೋಕೊಪಯೋಗಿ ಇಲಾಖೆಯ ಅಪೇಂಡಿಕ್ಸ-ಇ ಅನುದಾನದಡಿ ಮಂಜೂರಾದ ರೂ.2.75 ಕೋಟಿ ವೆಚ್ಚದ ಜಮಗಾ(ಜೆ) ಕ್ರಾಸ್ ನಿಂದ ಮಾದನಹಿಪ್ಪರಗಾ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.

ಆಳಂದ ಮತಕ್ಷೇತ್ರದ ಶಾಸಕನಾಗಿ ಚುನಾಯಿತನಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರೀಕ್ಷೆಗೂ ಮೀರಿ ಅನುದಾನ ತಂದಿದ್ದೇನೆ ಅದರ ಫಲವಾಗಿಯೇ ಇಂದು ಕಾಮಗಾರಿಗಳು ಪ್ರಗತಿಯಲ್ಲಿವೆ. ಜನ ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸತತ ಪ್ರಯತ್ನಿಸುತ್ತಿದ್ದೇನೆ ಅಲ್ಲದೇ ಈ ಹಿಂದೆ ನೀಡಿದ ಭರವಸೆಯಂತೆ ನುಡಿದಂತೆ ನಡೆದಿದ್ದೇನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮುಖಂಡರಾದ ಚೆನ್ನವೀರ ಕಾಳಕಿಂಗೆ, ಅಶೋಕ ಗುತ್ತೇದಾರ, ಸಿದ್ದು ಹಿರೋಳಿ, ಕೆ ಬಿ ಮೂಲಗೆ, ಜಗದೇವಪ್ಪ ಪಾಟೀಲ, ರಮೇಶ ಪಾಟೀಲ, ಗುರು ಲಾವಣಿ, ದತ್ತಾ ಪಾಟೀಲ, ಸಿದ್ದಾರಾಮ ಶೇಳಕೆ ಸೇರಿದಂತೆ ಇತರರು ಇದ್ದರು.