ಜಬಲ್‌ಪುರ:ಹಳಿ ತಪ್ಪಿದ ಎಲ್‌ಪಿಜಿ ವ್ಯಾಗನ್

ಜಬಲ್‌ಪುರ,ಜೂ.೭-ಎಲ್‌ಪಿಜಿ ಸಾಗಾಣಿಕೆ ಮಾಡುತ್ತಿದ್ದ ಸರಕು ಸಾಗಾಣಿಕೆ ರೈಲಿನ ಎರಡು ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ ಶಹಾಪುರ ಭಿಟೋನಿಯಲ್ಲಿ ಸಂಭವಿಸಿದೆ. ಈ ಕುರಿತು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿರುವುದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಲ್‌ಪಿಜಿಯನ್ನು ಅನ್‌ಲೋಡ್ ಗೂಡ್ಸ್ ರೈಲನ್ನು ನಿಲ್ಲಿಸಿದ ಸಂದರ್ಭದಲ್ಲಿ ಎರಡು ವ್ಯಾಗನ್‌ಗಳು ಹಳಿ ತಪ್ಪಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಮಾಹಿತಿ ನೀಡಿದೆ. ತಡರಾತ್ರಿ ಗೂಡ್ಸ್ ರೈಲಿನಿಂದ ಎಲ್‌ಪಿಜಿಯನ್ನು ಅನ್‌ಲೋಡ್ ಮಾಡಲು ನಿಲ್ಲಿಸಿದ್ದ ಸಂದರ್ಭದಲ್ಲಿ ಹಳಿ ತಪ್ಪಿದೆ. ಇಂದು ಬೆಳಿಗ್ಗೆ ಹಳಿ ತಪ್ಪಿದ ೨ ವ್ಯಾಗನ್‌ಗಳನ್ನು ತೆರವುಗೊಳಿಸಲಾಗಿದೆ ಆದ್ದರಿಂದ ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ತಿಳಿಸಿದೆ.
ಮೊನ್ನೆಯಷ್ಟೇ ಒಡಿಶಾದ ಬಾಲಾಸೋರ್ ರೈಲು ಅಪಘಾತ ಸಂಭವಿಸಿ ೨೫೦ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇತ್ತೀಚಿಗೆ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದ ಬಳಿಕ ಸರಕು ಸಾಗಾಣಿಕಾ ಬೋಗಿಗಳು ಹಳಿ ತಪ್ಪಿದ್ದವು. ಆದರೆ ಯಾವುದೇ ಪ್ರಾಣಾಹಾನಿ ಸಂಭವಿಸಿರಲಿಲ್ಲ.