ಜಪ್ತಿ ವಾಹನ ಬೆಂಕಿಗಾಹುತಿ

ಕೆ.ಆರ್.ಪುರ,ಏ.೧೯- ಜಪ್ತಿ ಮಾಡಲಾಗಿದ್ದ ವಾಹನಗಳು ಬೆಂಕಿ ಆಹುತಿಯಾಗಿರುವ ಘಟನೆ ಮಹದೇವಪುರ ಕ್ಷೇತ್ರದ ಆವಲಹಳ್ಳಿ ಪೋಲಿಸ್ ಠಾಣೆಯ ಸಮೀಪ ನಡೆದಿದೆ. ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ,ಸುಮಾರು ನೂರಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಬೈಕ್,ಆಟೋ,ಕಾರ್ ಸೇರಿ ೧೦೦ಕ್ಕೂ ವಾಹನಗಳು, ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದೆ. ಆವಲಹಳ್ಳಕ ಪೋಲಿಸ್ ಠಾಣೆ ಸಮೀಪದಲ್ಲಿ ನಿಲ್ಲಿಸಿದ್ದ ವಾಹನಗಳು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹರಸಾಹಸ ಪಟ್ಟಿದ್ದಾರೆ. ಬೆಂಕಿ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.