ಜಪ್ತಿ ಮಾಡಿರುವ ದ್ವಿಚಕ್ರವಾಹನ ಕೊಡಿ ಎಂದು ಎಸಿಪಿ ಕಾಲಿಗೆ ಬಿದ್ದ ಯುವಕ

ಕಲಬುರಗಿ,ಜೂ.8: ಜಪ್ತಿ ಮಾಡಲಾದ ದ್ವಿಚಕ್ರವಾಹನ ಬಿಡುವಂತೆ ಯುವಕನೋರ್ವ ಮಹಿಳಾ ಪೋಲಿಸ್ ಕಾಲಿಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಹಲವು ದ್ವಿಚಕ್ರವಾಹನಗಳನ್ನು ಪೋಲಿಸರು ಜಪ್ತಿ ಮಾಡಿದ್ದರು. ಈ ವೇಳೆ ಯುವಕನ ದ್ವಿಚಕ್ರವಾಹನ ಕೂಡ ಜಪ್ತಿಯಾಗಿತ್ತು. ಬಳಿಕ ನಗರದ ಸೂಪರ್ ಮಾರ್ಕೆಟ್ ಬಳಿಯಿರುವ ಎಸಿಪಿ ಕಚೇರಿಗೆ ತೆರಳಿದ ಯುವಕ ನನ್ನಿಂದ ತಪ್ಪಾಗಿದೆ ಮೇಡಂ. ನನ್ನ ದ್ವಿಚಕ್ರವಾಹನ ಕೊಡಿ ಎಂದು ಎಸಿಪಿ ಸುಧಾ ಆದಿ ಅವರ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾನೆ.
ಎಸಿಪಿಯವರು ಮುಖ್ಯಮಂತ್ರಿಗೆ ಬೇಕಾದರೂ ಹೇಳು, ದ್ವಿಚಕ್ರವಾಹನ ಮಾತ್ರ ಕೊಡಲ್ಲ. ಇಲ್ಲಿಂದ ಹೋಗು ಎಂದು ಗದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.