ಜಪಾನ್ ದೇಶದ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ಗೌರಿ ಬಗಲಿ

ಇಂಡಿ, ಜೂ.6-ಜಪಾನಿನ ಪ್ರಧಾನಿಯವರಿಂದ ಘೋಷಿತ, ಏಷ್ಯಾ ದೇಶದ ಹೈಸ್ಕೂಲ ವಿದ್ಯಾರ್ಥಿಗಳಿಗಾಗಿ ಕೊಡಮಾಡುವ ಒಂದು ವರ್ಷದ ಶಿಷ್ಯವೇತನ ಸಹಿತ ಶಿಕ್ಷಣವನ್ನು ಪಡೆಯಲು ಕುಮಾರಿ ಗೌರಿ ಸಂಕೇತ ಬಗಲಿ ಅರ್ಹರಾಗಿದ್ದಾರೆ.
ಕನಸುಗಳಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವದು ಕೇವಲ ಸ್ಫೂರ್ತಿಯ ಮಾತಲ್ಲ. ಅದೆಷ್ಟೋ ಯುವ ಜನರು ಸಣ್ಣ ವಯಸ್ಸಿನಲ್ಲಿಯೇ ಹೊಸ ಕಲ್ಪನೆಗಳ ಬೆನ್ನು ಹತ್ತಿ ಯಶಸ್ಸು ಸಾಧಿಸಿದ್ದಾರೆ. ಅಂತಹ ವಿನೂತನ ಸಾದನೆಯ ಚಿಗುರುಗಳಲ್ಲಿ ಗೌರಿ ಒಬ್ಬಳು. ಅಖಿಲ ಭಾರತದಾದ್ಯಂತ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ದೊರಕಿಸಿಕೊಂಡು ವಿಜಯಪೂರದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಸಧ್ಯ ಎಸ್.ಎಸ್.ಎಲ್. ಸಿ ಪರೀಕ್ಷೆ ಪಾಸಾಗಿ ಮುಂದಿನ ಶಿಕ್ಷಣ ಜಪಾನದಲ್ಲಿ ಕಲಿಯಲು ಈ ಆಯ್ಕೆ. ಗೌರಿ ಜಪಾನಿನಲ್ಲಿ ಕಲಿಯುವ ಎಲ್ಲ ಖರ್ಚನ್ನು ಜಪಾನ ಸರಕಾರ ನೀಡುತ್ತದೆ. ಭಾರತದಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಗೌರಿ ಭಾರತಕ್ಕೆ ಪ್ರಥಮ ಸ್ಥಾನ. ವಿದ್ಯಾರ್ಥಿಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಉದ್ದೇಶಿಸಿರುವ ಜಪಾನಿನ ಶಿಕ್ಷಣ ನೀತಿಯು ವಿದ್ಯಾರ್ಥಿಯ ಶಿಕ್ಷಣ ವ್ಯವಸ್ಥೆಗೆ ಹೊಸ ನೀರಿನ ಹರಿವು, ದಿಟ್ಟ ಸಮಗ್ರ ಮತ್ತು ದೊಡ್ಡ ಪ್ರಮಾಣದ ಪರಿವರ್ತನೆಯ ಸಾಧ್ಯತೆಯನ್ನು ರೂಪಿಸುತ್ತದೆ.
ಕುಮಾರಿ ಗೌರಿ, ಸಂಕೇತ ಮತ್ತು ಜಯಲಕ್ಷ್ಮೀ ಬಗಲಿ ಅವರ ಸುಪುತ್ರಿ ಮತ್ತು ಇಂಡಿಯ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮತ್ತು ವಿಜಯಪೂರ ಬಿ.ಎಲ್.ಡಿ.ಈ ವೈದ್ಯಕೀಯ ಮಹಾವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಸತೀಶ ಜಿಗಜಿನ್ನಿಯವರ ಮೊಮ್ಮಗಳು. ಸಧ್ಯ ಕೋಲಾಪುರದ ಸಂಜಯ ಘೋಡಾವತ ಶಾಲೆಯ ವಿದ್ಯಾರ್ಥಿನಿ. ಗೌರಿಯ ಶಿಕ್ಷಣವು ಜಪಾನಿನಲ್ಲಿ ದೂರದೃಷ್ಟಿಯ, ಮಹತ್ವಾಕಾಂಕ್ಷೆಯ ಮತ್ತು ಸಮಗ್ರ ನೀತಿ ವಿಶೇಷವಾಗಿ ವಿದ್ಯಾರ್ಥಿಗೆ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲಿದೆ.
ಗೌರಿ ಜೊತೆಗೆ ಹತ್ತು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಯೋಜನೆಯು ಜಪಾನಿನ ಏಶಿಯಾ ಕಾಕೆಶಿಯಾ ಶಿಕ್ಷಣಕ್ಕೆ ಸಂಬಂದಿಸಿದೆ. ಗೌರಿ ಜಪಾನಕ್ಕೆ ಯುವ ಅಂಬಾಸೆಡರ ಆಗಿ ಭಾರತದ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾಳೆ. ಈ ಶಿಕ್ಷಣ ಜಪಾನಿನಲ್ಲಿ ವಿದ್ಯಾರ್ಥಿಗಳಿಗೆ ಅಂತರ ರಾಷ್ಟ್ರೀಯ ಮತ್ತು ಜಾಗತೀಕ ಮಟ್ಟದಲ್ಲಿ ಬೆಳವಣೆಗೆಗೆ ಸಹಕಾರಿಯಾಗಲಿದೆ. ಜೊತೆಗೆ ಏಷಿಯಾ ದೇಶಗಳ ವಿದ್ಯಾರ್ಥಿಗಳನ್ನು ಶಿಕ್ಷಣ ಮತ್ತು ಸಾಂಸ್ಕøತಿಕ ಮಟ್ಟವನ್ನು ವಿದ್ಯಾರ್ಥಿ ದೆಶೆಯಲ್ಲಿ ಹೆಚ್ಚಿಸಲಿದೆ. ಅದಲ್ಲದೆ ಬೇರೆ ದೇಶದ ಶಿಕ್ಷಣ ವೈಯಕ್ತಿಕ ಬೆಳವಣೆಗೆ ಅವಕಾಶವಾಗಲಿದೆ.