ಜಪಾನ್‌ನಲ್ಲಿ ರಾಜ್ ಹುಟ್ಟುಹಬ್ಬ ಆಚರಣೆ

ಜಪಾನ್,ಏ.೨೪-ಇಂದು ವರನಟ ಡಾ.ರಾಜ್‌ಕುಮಾರ್‌ರವರ ೯೫ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಈ ಹಿನ್ನೆಲೆ, ಅಣ್ಣಾವ್ರ ಅಭಿಮಾನಿಗಳು ಎಲ್ಲೆಡೆ ರಾಜ್‌ಕುಮಾರ್ ಹುಟ್ಟನ್ನು ಹಬ್ಬಂದತೆ ಆಚರಿಸುತ್ತಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಜ್‌ಕುಮಾರ್‌ಗೆ ಬೇರೆ ದೇಶ, ರಾಜ್ಯಗಳಲ್ಲೂ ಅಭಿಮಾನಿ ಬಳಗವಿದೆ. ಹೀಗಾಗಿ ಜಪಾನ್‌ನಲ್ಲಿ ಅಣ್ಣಾವ್ರ ಅಭಿಮಾನಿಗಳು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
ಜಪಾನ್‌ನಲ್ಲಿರುವ ರಾಜ್ ಅಭಿಮಾನಿಗಳು ಅಣ್ಣಾವ್ರ ಭಾವಚಿತ್ರದ ಮುಂದೆ ಕೇಕ್ ಇಟ್ಟು ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿಯೂ ನೂರಾರು ಅಭಿಮಾನಿಗಳು ಬರುತ್ತಿದ್ದು, ಅಣ್ಣಾವ್ರ ಸಮಾಧಿ ದರ್ಶನ ಪಡೆದು ಪುನೀತರಾಗಿದ್ದಾರೆ.