ಜನ ಸ್ನೇಹಿ ಪೊಲೀಸ್ ಇಲಾಖೆ – ಡಿವೈಎಸ್‌ಪಿ

ಸಿಂಧನೂರು.ಜು.೯-ನಾನು ಕರ್ತವ್ಯ ನಿರ್ವಹಿಸಿದ ಭಾಗಗಳಲ್ಲಿ ಕಾನೂನು ಬಾಹೀರ ಚಟುವಟಿಕೆಗಳಿಗೆ ಅವಕಾಶ ಕೊಡದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತಗೆದು ಕೊಂಡು ಶಾಂತಿ ಕದಡದಂತೆ ನೋಡಿಕೊಂಡಿದ್ದೆನೆ ಎಂದು ನೂತನ ಡಿ.ವೈ.ಎಸ್.ಪಿ ವೆಂಕಟಪ್ಪ ನಾಯಕ ತಿಳಿಸಿದರು.
ತಮ್ಮ ಕಛೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದವರು ಆಕ್ರಮ ಚಟುವಟಿಕೆಗಳಿಂದ ಜನ ಶಾಂತಿ-ನೆಮ್ಮದಿ ಯಿಂದ ಬದಕಲು ಸಾಧ್ಯವಿಲ್ಲ ಆದರಿಂದ ಕಾನೂನು ಬಾಹೀರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜನರ ಸಹಕಾರ ಅಗತ್ಯ ಇದೆ ಎಂದರು.
ಮೂಲತಃ ಕೊಪ್ಪಳ ಜಿಲ್ಲೆಯವರಾದ ವೆಂಕಟಪ್ಪ ನಾಯಕ ಪದವಿದರರಾಗಿದ್ದು ೧೯೯೮ ರಲ್ಲಿ ಪಿ.ಎಸ್.ಐ ಯಾಗಿ ಪೊಲೀಸ್ ಇಲಾಖೆ ಸೇರಿಕೊಂಡು ಭಟ್ಕಳ,ಯಲ್ಲಪೂರು ಕೆಲಸ ಮಾಡಿ ನಂತರ ಸಿ.ಪಿ.ಐ ಯಾಗಿ ಬಡ್ತಿ ಪಡೆದು ಧಾಂಡೇಲಿ, ಕೊಪ್ಪಳ, ಗದಗ ಜಿಲ್ಲೆಯ ರೋಣ ಡಿ.ವೈ.ಎಸ್.ಪಿ ಯಾಗಿ ಬಡ್ತಿ ಪಡೆದು ಕಾರವಾರ ,ಚಿತ್ರದುರ್ಗ, ಹಿರೇಕೆರೂರು,ಕೊಪ್ಪಳದಲ್ಲಿ ಕೊಲಸ ಮಾಡಿ ಈಗ ಸಿಂಧನೂರು ಡಿ.ವೈ.ಎಸ್.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ೨೦೧೧ ರಲ್ಲಿ ವೆಂಕಟಪ್ಪ ನಾಯಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಬಂದಿದೆ.
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ಆರೋಪಿ ಗಳ ಮೇಲೆ ಕಾನೂನು ಕ್ರಮ ತಗೆದುಕೊಂಡು ಹಲವಾರು ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು ನಾನು ಹಿಂದೆ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಕಾನೂನು ಬಾಹೀರ ಚಟುವಟಿಕೆಗಳಿಗೆ ಅವಕಾಶ ಕೊಡದೆ ತಪ್ಪ ಮಾಡಿದವರಿಗೆ ನಿರ್ದಕ್ಷಣೆವಾಗಿ ಕಾನೂನು ಕ್ರಮ ತಗೆದು ಕೊಂಡಿದ್ದೇನೆ.
ಸಿಂಧನೂರು ಡಿ.ವೈ.ಎಸ್.ಪಿ ವ್ಯಾಪ್ತಿಯಲ್ಲಿ ಯಾವುದೆ ಅಪರಾಧಿ ಚಟುವಟಿಕೆಗಳು ನಡಯದಂತೆ ಸಭೆ ಕರೆದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ನೊಂದು-ಬೆಂದ ಜನ ಠಾಣೆಗೆ ಬಂದಾಗ ನ್ಯಾಯ ಸಿಗಬೇಕು ಅಪರಾಧಿಗಳಿಗೆ ಶಿಕ್ಷೆಯಾಗ ಬೇಕು ಪೊಲೀಸ್ ಇಲಾಖೆ ಜನ ಸ್ನೇಹಿ ಇಲಾಖೆಯಾಗಿದ್ದು ಪೊಲೀಸರ ಜೊತೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಅಪರಾಧ ಚಟುವಟಿಕೆಗಳು ತಡೆದು ಸಮಾಜದಲ್ಲಿ ಜನ ಶಾಂತಿಯಿಂದ ಇರಲು ಸಾಧ್ಯ ಎಂದರು.