ಜನ ಸಾಮಾನ್ಯರಿಗೆ ಉತ್ತಮ ಬಜೆಟ್

ವಿಜಯಪುರ,ಫೆ.2: ಕೇಂದ್ರ ಸರ್ಕಾರ ಬಜೆಟ್ ಮಂಡನೆಯಲ್ಲಿ ಇತಿಹಾಸ ಸೃಷ್ಟಿಸಿದೆ. ರೈತರು, ಬಡವರು, ಮಹಿಳೆಯರಿಗೆ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ಯುವಕರಿಗೆ ಹಾಗೂ ಕೈಗಾರಿಕೆಗಳಿಗೆ, ಪ್ರವಾಸೋದ್ಯಮಗಳಿಗೆ ಸಾಕಷ್ಟು ಮಾನ್ಯತೆ ಕೊಟ್ಟಿದೆ ಎಂದು ಬಿಜೆಪಿ ರಾಜ್ಯ ವೃತ್ರಿಪರರ ಪ್ರಕೋಷ್ಠದ ಸದಸ್ಯ ವಿಜಯಕುಮಾರ ಕುಡಿಗನೂರ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿದ್ದು, ಮೆಟ್ರೋ ರೈಲು ಯೋಜನೆ ವಿಸ್ತರಣೆ, ಮುಂದಿನ 5 ವರ್ಷಕ್ಕೆ 3 ಕೋಟಿ ಮನೆಗಳು, ಶೇ. 70ರಷ್ಟು ಮಹಿಳೆಯರಿಗೆ ಮನೆ, 1 ಕೋಟಿ ಮನೆಗಳಿಗೆ ಸೌರ ವಿದ್ಯುತ್, ಎಲೆಕ್ಟ್ರಿಕಲ್ ವಾಹನಗಳಿಗೆ ಆದ್ಯತೆ, ಮಕ್ಕಳಿಗೆ ಉಚಿತ ವ್ಯಾಕ್ಸಿನ್ ನೀಡಿದ್ದು ಶ್ಲಾಘನೀಯ ಎಂದು ಹೇಳಿದ್ದಾರೆ.