ಜನ ಸಂಪರ್ಕ ಸಭೆ


ಲಕ್ಷ್ಮೇಶ್ವರ,ಮೇ.27:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಶುಕ್ರವಾರ ಗದಗ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ಜರುಗಿತು.
ಸಭೆಯಲ್ಲಿ ಮೊದಲು ಜನರ ಆವಾಲುಗಳನ್ನು ಎಸ್ಪಿ ಅವರ ಗಮನಕ್ಕೆ ತಂದರು ಇದರಲ್ಲಿ ಪ್ರಮುಖವಾಗಿ ಶಿಗ್ಲಿ ನಾಕಾದಿಂದ ದೂದನಾನಾ ದರ್ಗಾವರೆಗೆ ಕಟ್ಟುನಿಟ್ಟಿನ ಸಂಚಾರ ಕ್ರಮ ಇದೇ ರಸ್ತೆಯ ಫುಟಪಾತ ಮೇಲಿನ ಅತಿಕ್ರಮನ ತೆರುವು ಶಿಗ್ಲಿ ನಾಕಾ ಸಂಪೂರ್ಣ ಕ್ರಾಶ ಪಂಪ ವೃತ್ತ ಮತ್ತು ಗದಗ ನಾಕಾದಲ್ಲಿ ಟ್ರಾಫಿಕ್ ಸಿಂಗ್ನಲ್‍ನಲ್ಲ ಅಳವಡಿಸುವುದು ಬಿದಿ ಬದಿ ವ್ಯಾಪಸ್ಥರಿಗೆ ವ್ಯಾಪಾರ ವಲಯ ಗುರುತಿಸುವುದು ಗ್ರಾಮೀಣ ಪ್ರದೇಶದಿಂದ ಬರುವ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ರಸ್ತೆಯಲ್ಲಿ ಹಾಕಿರುವ ಮೀತಿಮಿರಿದ ಹಂಪ್ಸ್ ಮೊಬೈಲ್ ಕಳ್ಳತನ ಮತ್ತು ಸೈಬರ್ ಕ್ರೈಮ್ ಪ್ರಕರಣಗಳ ಬಗ್ಗೆ ವಿಚಾರಣೆ ಮಾಡುವುದು ಪೆÇಲೀಸ್ ಸಿಬ್ಬಂದಿ ಹೆಚ್ಚಳ ಮತ್ತು ಅಲ್ಲಲ್ಲಿ ನಡೆಯುತ್ತಿರುವ ರ್ಯಾಂಗಿಂಗ್ ಪ್ರಕರಣದ ಬಗ್ಗೆ ಗಮನ ಹರಿಸುವುದು ಓವರ ಲೋಡ ಮತ್ತು ಟಿಪ್ಪರಗಳ ಹಾವಳಿ ಸೇರಿದಂತೆ ಅನೇಕ ಅವಾಲುಗಳು ಸಭೆಯಲ್ಲಿ ಕೇಳಿ ಬಂದವು ಬಳಿಕ ಸಭೆಯಲ್ಲಿ ಮಾತನಾಡಿದ ಎಸ್ಪಿ ಬಿ.ಎಸ್.ನೇಮಗೌಡ ಅವರು
ಪ್ರತಿಯೊಂದು ಸಮಸ್ಯೆಗಳಿಗೂ ಸಮರ್ಪಕ ಉತ್ತರ ನೀಡಿ ಪ್ರತಿಯೊಂದು ಇಲಾಖೆಗಳು ಜನ ಸಾಮಾನ್ಯರ ಕುಂದುಕೊರತೆಗಳನ್ನು ಪರಿಹರಿಸಲು ಸಮನ್ವಯ ಸಭೆ ನಡೆಸಬೇಕೆಂದು ಹೇಳಿದರು
ಪಟ್ಟಣದಲ್ಲಿ ಪ್ರಮುಖವಾಗಿ ಟ್ರಾಫಿಕ್ ಅಳವಡಿಸಲು ಪುರಸಭೆ ಅನುದಾನ ಕಲ್ಪಿಸಿದರು ಅನುಭವಿ ಮತ್ತು ತಜ್ಞ ಕೆಲಸಗಾರರ ಮೂಲಕ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪೆÇಲೀಸ್ ಸಂಖ್ಯಾಬಲ ಹೆಚ್ಚಿಸಲು ಕುರಿತು ಸಿಪಿಐ ಕಛೇರಿ ಆರಂಭವಾದರೆ ಅದಕ್ಕೆ ಅನುಗುಣವಾಗಿ ಪೆÇಲೀಸ್ ಸಂಖ್ಯಾಬಲ ಹೆಚ್ಚುತ್ತದೆ ಈ ನಿಟ್ಟಿನಲ್ಲಿ ಗೃಹ ಇಲಾಖೆಗೆ ಉನ್ನತ್ತ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು
ಸಭೆಯಲ್ಲಿ ತಹಶಿಲ್ದಾರ ಕೆ.ಆನಂದ ಸಿಲ್ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ ಬಡಿಗೇರ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಲೋಕೋಪಯೋಗಿ ಇಲಾಖೆಯ ಮಾರುತಿ ರಾಥೋಡ ಇದ್ದರು ಚರ್ಚೆಯಲ್ಲಿ ಚಂಬಣ್ಣ ಬಾಳಿಕಾಯಿ ನೀಲಪ್ಪ ಕರ್ಜಕನವರ ಮಂಜುನಾಥ ಹೊಗೆಸೊಪ್ಪಿನ ಬಸವರಾಜ ಹೀರೆಮನಿ ಪಿ.ಬಿ.ಕರಾಟೆ ಮುಕ್ತಾರಾಹಮ್ಮದ ಗದಗ ಸಾಹೇಬ್ ಜಾನ ಹವಾಲ್ದಾರ್ ಶರಣು ಗೋಡಿ ಪ್ರಕಾಶ ಮಾದನೂರ ಸುಲೇಮಾನ ಕಣಕೆ ಸೋಮನಗೌಡ್ರು ಪಾಟೀಲ್ ನೀಲಪ್ಪ ಪಡಗೇರಿ ಸಂತೋಷ ಜಾವೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಿಪಿಐ ವಿಕಾಶ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು ಡಿ.ಪ್ರಕಾಶ ಸ್ವಾಗತಿಸಿದರು.ನಂತರ ಎಸ್ಪಿ ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಪ್ರಮುಖ ರಸ್ತೆಗಳ ಅವಲೋಕನ ಮಾಡಿದರು.