ಜನ ಸಂಪರ್ಕ ಕಚೇರಿ ಆರಂಭಿಸಿದ ನಗರ ಶಾಸಕರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.24: ನಗರದ  ಜನರ ಸಮಸ್ಯೆಗಳನ್ನು ಆಲಿಸಲು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು.  ಬಿಜೆಪಿ ಪಕ್ಷದ  ಜನಪರ ಕಚೇರಿಯನ್ನು ಇಂದು  ಉದ್ಘಾಟನೆ ಮಾಡಿದರು.
ನಗರದ ಅನಂತಪುರಂ ರಸ್ತೆಯ  ಚಕ್ರವರ್ತಿ ವೈನ್ ಶಾಪ್ ಎದುರಿಗೆ ಈ ಕಚೇರಿಯನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಕಚೇರಿಯಲ್ಲಿ 17, 18, 19 ಮತ್ತು  20 ನೇ ವಾರ್ಡುಗಳಲ್ಲಿನ ಜನರು ಬಂದು ಇಲ್ಲಿ ತಮ್ಮ ದೂರು ದುಮ್ಮಾನುಗಳನ್ನು ಸಲ್ಲಿಸಿದರೆ. ನಾನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಪರಿಹರಿಸುಚೆ. ನಮ್ಮ ಹಂತದಲ್ಲಿ ಪರಿಹರಿದುವ ವಿಷಯಗಳನ್ನು ಕೂಡಲೇ ಪರಿಹರಿಸುವ ಪ್ರಯತ್ನ ಮಾಡಲಿದೆ ಎಂದು  ತಿಳಿಸಿದರು.
ಈ  ಸಂದರ್ಭದಲ್ಲಿ ಪಕ್ಷದ  ಮುಖಂಡರುಗಳಾದ  ವೀರಶೇಖರರೆಡ್ಡಿ, ಮೋತ್ಕರ್ ಶ್ರೀನಿವಾಸ್,  ಕಿಟ್ಟಿ , ಶಶಿಕಲಾ ಕೃಷ್ಣ ಮೋಹನ್, ಹನುಮಂತು, ಕೆ.ಎಸ್.ಅಶೋಕ, ಸ್ಥಳೀಯ ಮುಖಂಡರುಗಳಾದ  ಲೋಕ ರೆಡ್ಡಿ, ರಾಮಕೃಷ್ಣ, ಮಚ್ಚಾ, ಮಂಜುನಾಥ್, ತಿಪ್ಪೇಶ್, ಮಲ್ಲಿ, ಶಿವು, ಉಮೇಶ್ ಇನ್ನಿ ತರರು ಇದ್ದರು.