ಜನ ಸಂಪರ್ಕಯಾತ್ರೆಯಲ್ಲ. ಬಿಜೆಪಿಯ ಪ್ರಚಾರ ಸಭೆ;  ಎಚ್.ಪಿ.ರಾಜೇಶ್

ಜಗಳೂರು.ನ.೨೨: ಜನ ಸಂಪರ್ಕಯಾತ್ರೆಯಲ್ಲ. ಸರ್ಕಾರದ ಕಾರ್ಯಕ್ರಮದಡಿ ಮನೋರಂಜನೆ ಬಿಜೆಪಿಯ ಪ್ರಚಾರ ಸಭೆಯಾಗಿದೆ ಆಗಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ವಾಲ್ಮಿಕಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನ.23 ರಂದು ಜಗಳೂರಿನಲ್ಲಿ ನಡೆಯುವ  ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುವ ಜನ ಸಂಪರ್ಕ ಸರ್ಕಾರದ ಕಾರ್ಯಕ್ರಮ

ವಾಗದೇ ಜನ ಸಂಕಷ್ಠಯಾತ್ರೆ ಯಾಗಿದೆ. ಸಿದ್ದರಾಮಯ್ಯನವರು ಸಿ.ಎಂ.ಆಗಿ ಜಗಳೂರಿಗೆ ಆಗಮಿಸಿದಾಗ 2500 ಕೋಟಿ ರೂ.ಗೂ ಅಧಿಕ ಅಭಿವೃಧ್ಧಿ ಕಾರ್ಯಗಳನ್ನು ಬುಕ್ ಲೆಟ್ ಮಾಡುವ ಮೂಲಕ ಪ್ರಚಾರ ಮಾಡಿದ್ದೆವೆ. 

ನಾಲ್ಕುವರೆ ವರ್ಷಗಳಲ್ಲಿ ಅಲಿ ಶಾಸಕರು ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಎಷ್ಟು ಮನೆ ತಂದಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.ಎಂದು ತೋರಿಸಲಿ?ಅಭಿವೃಧ್ಧಿ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.