ಜನ ಮೆಚ್ಚಿದ ನಟ’ : ಗೃಹ ಸಚಿವ ಆರಗ ಜ್ಞಾನೇಂದ್ರ ಗುಣಗಾನ

ಶಿವಮೊಗ್ಗ, ನ. 7: ‘ಪುನೀತ್ ರಾಜಕುಮಾರ್ ರವರು ಕೇವಲ ಅಭಿನಯದಿಂದ ಮಾತ್ರವಲ್ಲದೆ, ತಮ್ಮ ಸಮಾಜಮುಖಿ ಕೆಲಸಕಾರ್ಯಗಳ ಮೂಲಕವು ಜನಮಾನಸದಲ್ಲಿ ಮೆಚ್ಚುಗೆಗೆ, ಪ್ರೀತಿಗೆ ಪಾತ್ರರಾಗಿದ್ದರು. ಅವರನ್ನು ಕುಟುಂಬದ ಸದಸ್ಯನಂತೆ ಅಭಿಮಾನಿಗಳು ಕಾಣುತ್ತಿದ್ದರು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಸಮೀಪದ ಮೇಲಿನಕೊಪ್ಪ ಬಳಿ ಸ್ಥಳೀಯ ಗೆಳೆಯರ ಬಳಗ ಸಂಘಟನೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ವೇಳೆ, ಪುನೀತ್ ರಾಜಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದ ನಂತರ ಸಭಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಅವರು ದೈಹಿಕವಾಗಿ ಇಲ್ಲವಾಗಿದ್ದರೂ, ತಮ್ಮ ಉತ್ತಮ ಕೆಲಸಕಾರ್ಯಗಳ ಮೂಲಕ ಜನಮಾನಸದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅವರ ನಿಧನ ಕನ್ನಡ ಚಿತ್ರರಂಗ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಚಿವರು ಹೇಳಿದರು.
ಪುಷ್ಪಾರ್ಚನೆ: ಫುನೀತ್ ರಾಜಕುಮಾರ್ ರವರ ಭಾವಚಿತ್ರದ ಫ್ಲೆಕ್ಸ್ ಗೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ನಟನಿಗೆ ಸಂತಾಪ ಸೂಚಿಸಿದರು. ಈ ಸಂದರ್ಭಧಲ್ಲಿ ಮೇಣದ ಬತ್ತಿ ಬೆಳಗಿ ಹಾಗೂ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತುAttachments area