ಕಲಬುರಗಿ,ಜು.7:2023-2024ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಜೆಟ್ ಸಹಜವಾಗಿ ರಾಜ್ಯ ಜನರಿಗೆ ಕೂತುಹಲ ಮೂಡಿಸಿತ್ತು. ಆದರೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದವರೆ ಮೇಲೆ ಗೂಬೆ ಕೂರಿಸುವುದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಹಿಂದಿನ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಹಾಗೂ ಆರ್ಥಿಕ ನಿರ್ವಹಣೆ ಸರಿಯಾಗಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಆರ್ಥಿಕ ನಿರ್ವಹಣೆ ಸರಿಯಾಗಿ ನಿರ್ವಹಣೆಯಾಗದಿದ್ದರೆ, ಸಧ್ಯ ಜಿಎಸ್‍ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲಿ ಮುಂಚೂಣಿಯಲ್ಲಿ ಇದೆ ಈ ಹಿಂದಿನ ಬಿಜೆಪಿ ಸರ್ಕಾರ ಆರ್ಥಿಕ ಶಿಸ್ತು ಪಾಲಿಸದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಟೀಕಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಾದಾಯಿ ಯೋಜನೆಗೆ ಹಾಗೂ ಮೇಕೆದಾಟಿಗೆ ಅನುದಾನವನ್ನು ನೀಡಲಾಗುವುದೆಂದು ಘೋಷಿಸಿದ್ದರು. ಆದರೆ ಈ ಯೋಜ£ಗಳಿಗೆ ಅನುದಾನ ಘೋಷಿಸಿಲ್ಲ. ಕೇವಲ ಮೋದಿಯವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಚಿತವಾಯಿತು ಎಂಬ ಒಂದೇ ಕಾರಣದಿಂದ ಬೇರೆ ಬೇರೆ ನೆಪವೊಡ್ಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೊಕ್ ನೀಡಲಾಗಿದೆ ಇದು ಖಂಡನೀಯ ಅದು ತರ್ಕಹೀನ ನಿಲುವು ರಾಷ್ಟ್ರೀಯ ಶಿಕ್ಷಣ ನೀತಿಯ ಒಳ್ಳೆಯ ಅಂಶಗಳನ್ನು ಒಪ್ಪಿಕೊಳ್ಳದಿರುವುದು ಖೇದಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಠ್ಯಕ್ರಮ ವ್ಯವಸ್ಥೆ ಎನ್ನುವುದು ಒಂದಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಂತ ಇದೆ ಅದಕ್ಕೆ ಅನುಗುಣವಾಗಿ ರಾಜ್ಯ ಪಠ್ಯಕ್ರಮಗಳು ನಿರಂತರವಾಗಿ ಪರಾಮರ್ಶೆಗೆ ಒಳಗಾಗುತ್ತಿರುತ್ತದೆ. ಅದರ ಆಧಾರದಲ್ಲಿಯೇ ಪಠ್ಯವಸ್ತುಗಳು ರಚನೆಯಾಗಬೇಕಿರುತ್ತದೆ. ಅದರ ಆಧಾರದಲ್ಲೇ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತದೆ. ಅದರಲ್ಲಿನ ವ್ಯವಸ್ಥೆಯನ್ನು ಯಾವುದೇ ನೀತಿ ನಿರೂಪಕರು ಗೌರವಿಸಬೇಕಾಗುತ್ತದೆ. ಎನ್ನುವುದನ್ನು ಸರ್ಕಾರ ನೆನಪಿನಲ್ಲಿಡಬೇಕು. ಮಂಡಿಸಲಾಗಿರುವ ಮುಂಗಡ ಪತ್ರ, ಬಜೆಟ್ ಭಾಷಣ ಎನ್ನುವುದಕ್ಕಿಂತ ಚುನಾವಣಾ ರಾಜಕೀಯ ಪ್ರಚಾರ ಭಾಷಣವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಕ್ರಾಂತಿಕಾರವಾದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇಂದು ರಾಜ್ಯ ಹೊಂದಿದೆ ಎಂಬುದನ್ನು ಸಹ ಮುಖ್ಯಮಂತ್ರಿಗಳು ಗಮನಿಸಬೇಕು. ತಮ್ಮ ಕೈಯಲ್ಲಿ ಆಗದೆ ಇದ್ದರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ನೀಚ ರಾಜಕಾರಣ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ರೇಷ್ಮೆ ಇಲಾಖೆಯ ಸರ್ವತೋಮುಖ ಅಭಿವೃದ್ದಿಗಾಗಿ ಮುಂಗಡವಾಗಿ 2000 ಕೋಟಿ ರೂ.ಗಳನ್ನು ಮೀಸಲಿಡುತ್ತೇವೆ ಎಂದು ಸುಳ್ಳು ಹೇಳಿ ಈಗ ಕೇವಲ 200-250 ಕೋಟಿ ರೂ>ಗಳಅನುದಾನವನ್ನು ಮೀಸಲಿಡಲಾಗಿದೆ. ಒಟ್ಟಾರೆ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‍ನಲ್ಲಿ ಜನರಿಗೆ ಮಣ್ಣ ಎರಚುವ ಕೆಲಸ ಮಾಡಿದ್ದಾರೆ ಇದೊಂದು ಜನ ವಿರೋಧಿ, ಬಜೆಟ್ ಆಗಿರುತ್ತದೆ. ಕೇವಲ ಕೇಂದ್ರ ಸರ್ಕಾರವನ್ನು ನಿಂದನೆ ದ್ವೇಷ ಮನೋಭಾವನೆಯ ಭಾಷಣಕ್ಕೆ ಸೀಮಿತವಾಗಿತ್ತು, ಒಟ್ಟಾರೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಅವರು ದೂರಿದ್ದಾರೆ.