ಜನ ಬಲವೇ ನನ್ನ ಶಕ್ತಿ- ದದ್ದಲ್

ರಾಯಚೂರು, ಮೇ,೦೭- ಚುನಾವಣೆ ಪೂರ್ವ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸುವ ಜೊತೆಗೆ ನಿರಂತರವಾಗಿ ಜನ ಸಂಪರ್ಕದಲ್ಲಿದ್ದೇನೆ ಜನ ಬೆಂಬಲವೇ ನನಗೆ ಶಕ್ತಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಹೇಳಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಡ್ಲೂರು, ಕರೆಕಲ್ ,ಬೇವಿನಹಂಚಿ, ರಂಗಾಪುರ ಗುರ್ಜಾಪೂರ,ಮೀರಾಪೂರು, ಹೆಚ್ ತಿಮ್ಮಾಪುರ, ಹೆಂಬೇರಾಳ,ಜಿ ತಿಮ್ಮಾಪುರ,ಹನುಮಾಪೂರು ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಮತಯಾಚನೆ ಕೈಗೊಂಡು ಬಿರುಸಿನ ಪ್ರಚಾರ ಕೈಗೊಂಡರು.
ರಾಯಚೂರು ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಮತದಾರ ಪ್ರಭುಗಳು ಕೂಡ ಸ್ಟಾರ್ ಪ್ರಚಾರಾಕರೇ ನನ್ನ ಕ್ಷೇತ್ರದ ಮಾದರಿ ಕ್ಷೇತ್ರವಾಗಿ ಮಾಡಲು ಮತ್ತೊಮ್ಮೆ ನನಗೆ ಆರ್ಶಿವಾದ ಮಾಡಿ ನಿಮ್ಮ ಮನೆಯ ಮಗನಾಗಿ ದುಡಿಯುತ್ತೇನೆ,
ಪ್ರತಿಯೊಂದು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ದೊಡ್ಡ ದೊಡ್ಡ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಗ್ರಾಮ ಪಂಚಾಯತ್ ಸದ್ಯಸರು , ಕಾರ್ಯಕರ್ತರು, ಗ್ರಾಮಸ್ತರು ಉಪಸ್ಥಿತರಿದ್ದರು.