
ಚಾಮರಾಜನಗರ:ಮೇ,10:- ಚಾಮರಾಜನಗರದ ಪೇಟೆ ಪ್ರೈಮರಿ ಶಾಲೆಯಲ್ಲಿ ಪತ್ನಿ ಶೈಲಜಾ ಜೊತೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಮತ ಚಲಾಯಿಸಿದರು.
ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇಷ್ಟು ದಿನ ನಾನು ನಿಲ್ಲುತ್ತಿದ್ದು ಒಂದು ಕ್ಷೇತ್ರ- ವಿಳಾಸ ಬೇರೆ ಕ್ಷೇತ್ರವಾಗಿತ್ತು. ಆದರೆ, ಈ ಬಾರಿ ನನ್ನ ಪರವಾಗಿ ನಾನೇ ಮತ ಚಲಾಯಿಸಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಚಾಮರಾಜನಗರ ಜನರ ಮುಗ್ಧತೆಯೇ ಇಲ್ಲಿನ ಅಭಿವೃದ್ಧಿಗೆ ಕಂಟಕವಾಗಿದೆ, ಮತದಾರ ಪ್ರಭುಗಳು ಇಂದು ಸಂಜೆಯೊಳಗೆ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ, ಚಾಮುಂಡೇಶ್ವರಿ, ಮಲೆ ಮಹದೇಶ್ವರ ಏನು ಮಾಡುತ್ತಾನೋ ಗೊತ್ತಿಲ್ಲ ಎಂದರು.
ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿದ್ದು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ನಂಬಿಕೆ ಇದೆ, ಚಾಮರಾಜನಗರದಲ್ಲಿ ಮಧ್ಯಾಹ್ನ ತನಕ ಇದ್ದು ಬಳಿಕ ವರುಣಾಗೆ ತೆರಳಿ ಮತದಾನ ವೀಕ್ಷಿಸುತ್ತೇನೆ ಎಂದು ಸೋಮಣ್ಣ ಹೇಳಿದರು.
ಮತ ಚಲಾಯಿಸಿದ ಎನ್.ಮಹೇಶ್
ರಾಜ್ಯ ವಿಧಾನಸಭೆ ಚುನವಾಣೆಯ ಮತದಾನ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಐಎಸ್‍ಸಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಮಹೇಶ್ ಮತ ಚಲಾವಣೆ ಮಾಡಿದ್ದಾರೆ.
ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮತಗಟ್ಟೆ ಸಂಖ್ಯೆ 121ರಲ್ಲಿ ಎನ್.ಮಹೇಶ್ ಮತದಾನ ಮಾಡಿದರು. ಈ ವೇಳೆ ಶಾಸಕ ಎನ್.ಮಹೇಶ್ ಅವರಿಗೆ ಪುತ್ರ ಅರ್ಜುನ್ ಸಾಥ್ ನೀಡಿದರು. ಹಾಗೆಯೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ವೃದ್ಧರು, ಯುವ ಮತದಾರರು ಮತದಾನ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡುತ್ತಿದ್ದಾರೆ.
ಚಾಮರಾಜನಗರದ 74 ವರ್ಷದ ಮಧುಸೂಧನ್ ಎನ್ನುವ ಹೆಸರಿನ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್‍ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಈಗಾಗಲೇ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ವೃದ್ಧರು, ಯುವ ಮತದಾರರು ಮತದಾನ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡುತ್ತಿದ್ದಾರೆ.
ಅವಳಿ ಸೋದರ, ಸೋದರಿಯರ ಮೊದಲ ಮತದಾನ:
ಇದೇ ಮೊದಲ ಬಾರಿಗೆ ಅವಳಿ ಸೋದರ ಸೋದರಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಚಾಮರಾಜನಗರ ಶಂಕರಪುರ ನಿವಾಸಿಗಳಾದ ಶರಣ್ ಶಿವಾನಿ ಎಂಬ ಅವಳಿ ಸೋದರ ಸೋದರಿಯರು ಇದೇ ಮೊದಲ ಬಾರಿಗೆ ನಗರದ ಪೇಟೆ ಪ್ರೈಮರಿ ಶಾಲೆಯ ಮತಗಟ್ಟೆಗೆ ಅಗಮಿಸಿ ಮತದಾನ ಮಾಡಿದರು.
ಮೊದಲ ಮತದಾನ ಹೆಮ್ಮೆ ಆಗಿದೆ :
ನಾನು ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಯುವ ಮತದಾರರುಗಳಾದ ಉದಯ್ ಅರವಿಂದ್, ಕೀರ್ತಿಶ್ರೀ ಹಾಗೂ ರಾಘವನ್ ರವರುಗಳು ಸಂತಸ ವ್ಯಕ್ತಪಡಿಸಿದ್ಸಾರೆ.
ಮೊದಲ ಬಾರಿಗೆ ಮತ ಹಾಕುವ ಯುವಕರು ಒಬ್ಬ ಯೋಗ್ಯ ಸಮರ್ಥ , ಕ್ಷೇತ್ರದ ಸರ್ವ ಅಭಿವೃದ್ಧಿ ಮಾಡುವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಶೇಕಡ 100%ಕೆ 100% ಮತದಾನ ಆಗಲಿ ,ನನ್ನ ಮತ ನನ್ನ ಹಕ್ಕು ಎಂಬ ಧ್ಯೇಯ ಧ್ಯೇಯ