ಜನ ಜಾಗೃತಿ ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗೆ ಉಪವಾಸ ಸತ್ಯಗ್ರಾಹ

ಮಾನ್ವಿ.ಡಿ.೦೬- ಕಂದಾಯ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನ ಶಾಖೆಯಲ್ಲಿ ತಸ್ವೀಕ್ ಭತ್ಯ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಚಾರ ಹಾಗೂ ನಿಯಮ ಬಹಿರವಾಗಿ ವೃದ್ಯಪ್ಯ ವೇತನ ಮಂಜೂರು ಮಾಡಿರುವುದರಿಂದ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಪ್ಪಿತಸ್ಥ್ತರಾಗಿರುವ ಕುರ್ಡಿ ನಾಡತಹಸೀಲ್ದಾರ್ ಅಬ್ದುಲ್ ರೌಫ್ ರವರ ಮೇಲೆ ಅಗತ್ಯವಾದ ಶಿಸ್ತು ಕ್ರಮ ಕೈಗೊಳ್ಳಬೇಕು ರಾಜ್ಯಧ್ಯಕ್ಷ ಪಿ ಯೇಸಪ್ಪ ಪೋತ್ನಾಳ ಹೇಳಿದರು.
ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ಜನ ಜಾಗೃತಿ ತಾಲೂಕು ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಉಪವಾಸ ಸತ್ಯಗ್ರಾಹ ಪ್ರತಿಭಟನೆ ನಡೆಸಿ ರಾಜ್ಯಾಧ್ಯಕ್ಷ ಪಿ.ಯೇಸಪ್ಪ ಮಾತನಾಡಿ, ತಾಲೂಕಿನ ಅಡವಿ ಅಮರೇಶ್ವರ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ನಡೆಸಬೇಕು ಹಾಗೂ ಮೇಲ್ವಚಾರಕ ಚಂದ್ರಶೇಖರ ಹೂಗಾರ ವಸತಿನಿಲಯದ ಹತ್ತಿರದ ಕೇಂದ್ರಸ್ಥಾನದಲ್ಲಿ ಇರಬೇಕು ಹಾಗೂ ವಜಾ ಗೊಳಿಸಬೇಕು, ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಲಾಭ್ಯ ನೀಡಬೇಕು. ೨೦೦೮ ರ ಸಾಲಿನ ಡಾ.ಅಂಬೇಡ್ಕರ್‌ಅಭಿವೃದ್ದಿ ನಿಗಮ ರಾಯಚೂರು ನೀರಾವರಿ ಯೋಜನೆಯಡಿಯಲ್ಲಿ ಆಯ್ಕೆಯಾದ ೯ ಫಲಾನುಭವಿಗಳಿಗೆ ಹಂಚಿಕೆಮಾಡಲಾದ ಒಟ್ಟು ೨೪ ಎಕರೆ ಜಮೀನಿಗೆ ಅಗತ್ಯವಾದ ನೀರಾವರಿ ಸೌಲಭ್ಯ ಕಲ್ಪಿಸಲು ಜೆಸ್ಕಾಂ ವತಿಯಿಂದ ವಿದ್ಯುತ್ ಪರಿವರ್ತಕ ಆಳವಡಿಸುವಲ್ಲಿ ನಿರ್ಲಕ್ಷವಹಿಸುತ್ತಿರುವ ಜೆಸ್ಕಾಂ ಕಿರಿಯ ಅಭಿಯಾಂತರ ಸಲೀಂ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಎಂದು ಒತ್ತಾಯಿಸಿದರು.
ಜಿಲ್ಲಾ ಗೌರವಧ್ಯಕ್ಷ ವೀರೇಶ ಬಜಾರ, ಜಲಾಲ್ ನಾಯಕ, ಬಸವರಾಜ ಪೂಜಾರಿ, ಹುಸೇನಪ್ಪ ಭಂಡರಿ, ಮಾರೆಪ್ಪ ತುಪ್ಪದೂರು, ನಾಗರಾಜ ಉದ್ಭಾಳ್ನಾಗರಾಜ, ತಿಮ್ಮಣ್ಣ ಭೋವಿ, ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.