ಜನ ಜಾಗೃತಿ ಮೂಡಿಸಲು ನಾಟಕ ಸಹಕಾರಿ

ಬಳ್ಳಾರಿ, ನ.28: ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ನಾಟಕಕಾರರು ಬರೆದ ನಾಟಕಗಳು ಬಹು ಮುಖ್ಯ ಪಾತ್ರವಹಿಸಿವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥರಾದ ಪ್ರೊ.ಶಾಂತನಾಯಕ ಅವರು ಅಭಿಪ್ರಾಯಪಟ್ಟರು.
ಡಿ.ಆರ್.ಕೆ.ಮೆಮೋರಿಯಲ್ ಎಂಡೋಮೆಂಟ್,ಡಿ.ಆರ್.ಕೆ ರಂಗಸಿರಿ ಟ್ರಸ್ಟ್ ಬಳ್ಳಾರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ 109 ನೇ ಜಯಂತಿ ಕಾರ್ಯಕ್ರಮವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಟಿವಿಯಲ್ಲಿ ಪ್ರಸಾರವಾಗುವ ದಾರವಾಯಿಗಳಿಂದ ನಾಟಕ ಬಯಲಾಟದಂತಹ ಕಲೆಗಳು ಹಿನ್ನೆಲೆಗೆ ಸಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಜಯಂತಿಯ ಈ ಸಂದರ್ಭದಲ್ಲಿ ಅವರ ಹೆಸರಲ್ಲಿ ನೀಡುತ್ತಿರುವ ಡಿ ಆರ್ ಕೆ ಸಾಹಿತ್ಯ ಸಿರಿ ಪ್ರಶಸ್ತಿಗೆ ಡಾ.ಗೋವಿಂದ ಸಹಾಯಕ ಪ್ರಾದ್ಯಾಪಕರು ಹಾಗೂ ಡಿ ಆರ್ ಕೆ ರಂಗ ಸಿರಿ ಪ್ರಶಸ್ತಿಯನ್ನು ಡಾ.ಎಂ ಚಂದ್ರಪ್ಪ ಸಹಾಯಕ ಪ್ರಾದ್ಯಾಪಕರುಗಳಿಗೆ ನೀಡಿರುವುದು ಔಚಿತ್ಯಪೂರ್ಣವಾದುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಕುರಿತು ಡಾ.ಬಸಪ್ಪ ಕೆ ಮಾತನಾಡುತ್ತಾ ವೃತ್ತಯಲ್ಲಿ ವಕೀಲರಾಗಿದ್ದ ರಾಮಕೃಷ್ಣಮಾಚಾರ್ಯರು ಪ್ರವೃತ್ತಿಯಲ್ಲಿ ನಾಟಕದ ಗೀಳನ್ನು ಹಚ್ಚಿಕೊಂಡು ಸಮಾಜದಲ್ಲಿದ್ದ ಅನಿಷ್ಟ ಪದ್ದತಿಗಳನ್ನು ಮನಗಂಡು ಆ ಸಂಗತಿಯನ್ನು ನಾಟಕದ ಮೂಲಕ ತಿಳಿಸಿ ಜನಜಾಗೃತಿ ಮೂಡಿಸಿದರು. ಆರಂಭದಲ್ಲಿ ಕನ್ನಡದ ನಾಟಕ ಕ್ಷೇತ್ರದತ್ತ ವಾಲಿ ಅವರು ತೆಲುಗಿನಲ್ಲಿ 3೦ ನಾಟಕ ಕೃತಿಗಳನ್ನು ರಚಿಸಿದ್ದಾರೆ.ಆ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಆ ಕೃತಿಗಳ ಮಹತ್ವವು ಕನ್ನಡಿಗರಿಗೂ ತಿಳಿಯಲಿದೆ.ದೂರದ ಮದ್ರಾಸ್ ವರೆಗೂ ನಾಟಕ ತಂಡ ಕರೆದೊಯ್ದು ನಾಟಕ ಪ್ರದರ್ಶಿಸಿ ಯಶಸ್ವಿಯಾದ ದೀಮಂತ ಕಲಾವಿದ ಎಂದರೆ ತಪ್ಪಾಗಲಾರದು ಎಂದರು.
ಇದೇ ವೇಳೆ 2021ರ ಡಿ ಆರ್ ಕೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಹಾಯಕ ಪ್ರಾದ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಗೋವಿಂದ ಅವರಿಗೆ,ಡಿ ಆರ್ ಕೆ ರಂಗಸಿರಿ ಪ್ರಶಸ್ತಿಯನ್ನು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನಾಟಕ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಡಾ.ಎಂ ಚಂದ್ರಪ್ಪ ಅವರನ್ನು ವೇದಿಕೆ ಮೇಲಿನ ಗಣ್ಯರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ನಂತರ ರಾಮಕೃಷ್ಣಮಾಚಾರ್ಯರ ಮರಿ ಮೊಮ್ಮಗ ಮಹೇಂದ್ರನಾಥ ಮಾತನಾಡಿ ಡಿ ಆರ್ ಕೆ ರಂಗಮಂದಿರದಲ್ಲಿರುವ ನಮ್ಮ ಮುತ್ತಾತನ ಮೂರ್ತಿಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೋರಿಸಿ ಅವರ ನಾಟಕ ಕೃತಿಗಳ ಮಹತ್ವವನ್ನು ತಿಳಿಸುವ ಕಾರ್ಯಮಾಡುವುದಾದರೆ ನಮ್ಮಗಳ ಸಹಕಾರವಿದೆ ಎಂದರು.
ಮೊದಲಿಗೆ ವಿಷ್ಣು ಹಡಪದ, ವೀರೇಶ್ ದಳವಾಯಿ, ಉಮೇಶ್, ಉಷಾ, ಹುಲುಗಪ್ಪ ಅವರು ಸುಶ್ರಾವ್ಯವಾಗಿ ಗೀತಗಾಯನ ಮಾಡಿ ನೆರೆದ ಜನರನ್ನು ರಂಜಿಸಿದರು.
ಈ ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಪ್ರೊ.ರಾಬರ್ಟ್ ಜೋಷ್ ಮಾತನಾಡಿ ನಾಟಕವು ನೋಡುಗರ ಮನ ತಣಿಸುವುದಲ್ಲದೆ,ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.ಸಮಾಜದ ದೃಷ್ಟೀಕೋನವನ್ನು ಬದಲಾಯಿಸುತ್ತದೆ ಎಂದರು. ಸಂಬಶಿವ ದಳವಾಯಿ ಯವರು ದಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರ ಲೆಖನಗನ್ನು ದಾ. ಚಂದ್ರಪ್ಪ  ಸಂಪಾದಕತ್ವದ ರಂಗಜ್ಞಾನ ಪುಸ್ತಕ ಲೋಕಾರ್ಪಣೆ ಮಾಡಿ ದರು
       ಕಾರ್ಯಕ್ರಮವನ್ನು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಸ್ವಾಗತಿಸಿದರು. ಕೊನೆಗೆ ನಾಗರಾಜ ವಂದಿಸಿದರು.
Attachments area