
ಬೀದರ:ಮಾ.16ಸಾಮಾನ್ಯ ಜನರಲ್ಲಿ ಮಾರಕ ರೋಗ ಏಡ್ಸ ಜಾಗೃತಿ ಮೂಡಿಸುವ ಮೂಲಕ ಇದನ್ನು ತಡೆಗಟ್ಟಲು ಸಾಧ್ಯ ಎಂದು ಚಿಟಗುಪ್ಪಾ ಸಮುದಾಉ ಆರೋಗ್ಯ ಕೇಂದ್ರಸ ವೈದ್ಯಾಧಿಕಾರಿ ಡಾ. ವಿಜಯಕುಮಾರ ಹಿರ್ಸಕರ್ ತಿಳಿಸಿದ್ದಾರೆ.
ಅವರು ರೆಡ್ ರಿಬ್ಬನ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್‍ಸನ್ ಸೂಸೈಟಿ, ಬೀದರ ವತಿಯಿಂದ ಮಂಗಳವಾರದಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ‘ಹೆಚ್.ಐ.ವಿ ಏಡ್ಸ್-ಆರೋಗ್ಯ ಅರಿವು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಶಕಗಳ ಹಿಂದೆ ಏಡ್ಸ ರೋಗವು ಅತ್ಯಂತ ಅಪಾಯದ ಪ್ರಮಾಣದಲ್ಲಿ ಹರಡುತ್ತಿತ್ತು, ಜನರಲ್ಲಿ ಹೆಚ್ಚಿದ ಅರಿವಿನಿಂದ ಇಂದು ಸ್ವಲ್ಪ ನಿಂಯತ್ರಣದಲ್ಲಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೀದರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ವಿದ್ಯಾ ಪಾಟೀಲ ಅವರು ಪ್ರತಿಯೊಬ್ಬರು ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಿಸಬೇಕೆಂದು ಕರೆ ನೀಡಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ಡಾ ವೀರಶೆಟ್ಟಿ ಮೈಲೂರಕರ್ ಅವರು – ರೆಡ್ ರಿಬ್ಬನ್ ಕ್ಲಬ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ ಸುರೇಂದರ್ ಸಿಂಗ್ ಅಧ್ಯಕ್ಷತೆವಹಿಸಿzರು. “ಏಡ್ಸ ನಿಯಂತ್ರಣ ಹಾಗೂ ಜನ ಜಾಗೃತಿಯಲ್ಲಿ ಯುವಕರ ಪಾತ್ರ” ವಿಷಯ ಕುರಿತು ಹಮ್ಮಿಕೊಂಡಿದ್ದ ಪ್ರಭಂಧ ಸ್ಪರ್ಧೆಯ ವಿಜೇತರಾದ ಭಾಗ್ಯಶ್ರೀ-ಪ್ರಥಮ, ಸಾನಿಯಾ-ದ್ವಿತೀಯ ಮತ್ತು ಗುಂಡಮ್ಮಾ-ತೃತಿಯ ಬಹುಮಾನ ವಿತರಿಸಲಾಯಿತು. ಕರ್ನಾಟಕ ಸರಕಾರಿ ಕಾಲೇಜು ಅಧ್ಯಪಕರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಡಾ ವೀರಶೆಟ್ಟಿ ಮೈಲೂರಕರ್ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ಕಾರ್ಯದರ್ಶಿ ಪ್ರೋ. ದಶರಥ ನಯನೂರ, ಪ್ರೊ ಸಯೀದಾ ಬಾನು, ಪ್ರೋ ರವೀಂದ್ರ ಟಿಳೆಕರ್, ಡಾ. ಮನೋಹರ ಮೇತ್ರೆ ಡಾ. ಶ್ರೀನಿವಾಸ ರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.