
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ನಗರದ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಯಿಂದ ಇಲ್ಲಿನ ವಾಜಪೇಯಿ ಲೇಔಟ್ ನ ವೀ.ವಿ.ಸಂಘದ ನಿವೇಶನದಲ್ಲಿ ವೇದಿಕೆಯ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಿನ್ನೆ ನಡೆಯಿತು.
ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜ ದೇಸಿ ಕೇಂದ್ರ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.ಹರಗಿನಡೋಣಿ, ಅಂತಾಪುರ ಶ್ರೀಗಳು ಉಪಸ್ಥಿತರಿದ್ದರು. ವೇದಿಕೆಯ ರಾಜ್ಯಧ್ಯಕ್ಷ ಜೆ. ಎಂ. ಬಸವರಾಜ ಸ್ವಾಮಿ ಅಧ್ಯಕ್ಷತೆವಹಿಸಿದ್ದರು.
ಪ್ರತಿ ವರ್ಷ ತಾಲೂಕಿನ ಬಿ. ಬೆಳಗಲ್ಲು ಗ್ರಾಮದಲ್ಲಿ ನಡೆಯುತ್ತಿದ್ದ ಈ ವಿವಾಹ ಸಮಾರಂಭವನ್ನು ಈ ವರ್ಷ ಜನರ ಅನುಕೂಲಕ್ಕಾಗಿ ಇಲ್ಲಿ ಹಮ್ಮಿಕೊಂಡಿತ್ತು. 8 ನವ ಜೋಡಿಗಳು ಈ ಸಮಾರಂಭದಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಆಶಿರ್ವಚನ ನೀಡಿದ ಉಜ್ಜಯನಿ ಪೀಠದ ಶ್ರೀಗಳು ಇಲ್ಲಿ ಮದುವೆಯಾಗುವಂತವರು ಬಡವರಲ್ಲ, ಭಾಗ್ಯವಂತರು. ಯಾಕೆಂದರೆ ಶ್ರೀ ಪೀಠದ ಗುರುಗಳ ಸಾನಿದ್ಯದಲ್ಲಿ ಹಾಗೂ ಅನೇಕ ಮಹನೀಯರ ಸಮ್ಮುಖದಲ್ಲಿ ವಿವಾಹವಾಗುವಂತಹ ಭಾಗ್ಯವಂತರು. ಈಗಿನ ಕಾಲದಲ್ಲಿ ಆಡಂಬರದ ವಿವಾಹ ಆಗುವವವರೇ ಹೆಚ್ಚು ಆದರೆ ಈ ಸಂಘಟನೆಯು ಒಂದು ಮದುವೆಗೆ ಕನಿಷ್ಠ 2 ಲಕ್ಷದಂತೆ ಒಟ್ಟು 16 ಲಕ್ಷ ರೂಪಾಯಿಗಳನ್ನು ದೇಶಕ್ಕೆ ಉಳಿಸಿದ್ದಾರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ಜೆ. ಎಮ್. ಬಸವರಾಜ ಸ್ವಾಮಿ ಅವರು, ಬಡವರು ದೀನ ದಲಿತರ ಹೇಳಿಗಾಗಿ ಪ್ರತಿ ವರ್ಷ ಸಾಮೂಹಿಕ ವಿವಾಹಗಳನ್ನು ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಹಾಗೂ ದಾನಿಗಳ ಸಹಕಾರದೊಂದಿಗೆ ನಡೆಸುವುದಾಗಿ ತಿಳಿಸಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ,
ಕೆ ಎಮ್ ಮಹೇಶ್ವರ ಸ್ವಾಮಿ, ಗೌರವ ಅಧ್ಯಕ್ಷ ಬಿ.ಎಮ್. ಏರಿಸ್ವಾಮಿ, ಹೆಚ್. ಕೆ. ಗೌರಿಶಂಕರ್, ಜಿಲ್ಲಾ ಅಧ್ಯಕ್ಷ ಕೋಳೂರು ಚಂದ್ರಶೇಖರ್ ಗೌಡ, ಜೆ. ಡಿ ದೊಡ್ಡಬಸಪ್ಪ,ಮೋರಗೇರಿ ಕೊಟ್ರಯ್ಯ ಸ್ವಾಮಿ, ಬೆಳಗಲ್ ಸಿದ್ದಮೂರ್ತಿ ಸ್ವಾಮಿ, ಜೆ ಮಂಜುನಾಥ್,ಶಿವಶರಣ ಪಾಟೀಲ್, ಬಿ. ಚಿನ್ನಲಿಂಗನಗೌಡ, ಕಲ್ಲುಕಂಬ ಪಂಪಾಪತಿ,ಅಮರೇಶ್ ಎಚ್ ಎಂ, ಅಸುಂಡಿ ಮಲ್ಲಿಕಾರ್ಜುನ,ದಮ್ಮೂರ ರವಿ, ಹೊಸಳ್ಳಿ ವೆಂಕಟೇಶ್, ಶಿವಯ್ಯ ಸ್ವಾಮಿ ಪಂಪಾಪತಿ ಕೆಎಂ, ಕೆ. ಎಮ್. ಕೊಟ್ರೇಶ, ದೊಡ್ಡಯ್ಯ, ಗೋವರ್ಧನ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.