ಸಂಜೆವಾಣಿ ವಾರ್ತೆ
ಕುರುಗೋಡು:ಏ.1: ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬಡರೋಗಿಗಳ ಪಾಲಿಗೆ ಜನ ಔಷಧಿ ಕೇಂಧ್ರ ವರದಾನವಾಗಿದೆ. ಎಲ್ಲ ಬಗೆಯ ಔಷಧಿಗಳು ಕೇಂದ್ರದಲ್ಲಿ ರಿಯಾಯಿತಿ ಧರದಲ್ಲಿ ದೊರೆಯುತ್ತವೆ. ಔಷದಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಿಲಾಖೆ ಅಧೀಕ್ಷಕ ಬವರಾಜ, ವೈದ್ಯಾಧಿಕಾರಿ ಡಾ. ರೂಪಾಜಾಲಿಹಾಳ್, ಜನ ಔಷಧಿ ಕೇಂದ್ರದ ಮಾಲಿಕ ಎಸ್.ರವಿ, ಎಸ್.ನಾಗಪ್ಪ, ಚೇಗೂರು ಷಣ್ಮುಖ, ಜೆ.ವಿರೂಪಾಕ್ಷಿ ಮತ್ತು ಮಲ್ಲಿಕಾರ್ಜುನ ಇದ್ದರು.