ಜನ್‌ಧನ್ ಖಾತೆಗೆ ಹಣ ಬೇಕೇ? ಹಾಗಾದರೆ ಆಧಾರ್ ಲಿಂಕ್ ಮಾಡಿ

ಬೆಂಗಳೂರು,ನ.೧೪- ಜನ್‌ಧನ್ ಖಾತೆದಾರರು ತಮ್ಮ ಖಾತೆಗೆ ಕೂಡಲೇ ಆಧಾರ್ ಲಿಂಕ್ ಮಾಡದಿದ್ದರೆ ೧.೩೦ ಲಕ್ಷ ನಷ್ಟವಾಗಲಿದೆ. ಈ ಸೌಲಭ್ಯ ಪಡೆಯಬೇಕಾದರೆ ಕೂಡಲೇ ಜನ್‌ಧನ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಒಳಿತು. ಮೂಲಗಳ ಪ್ರಕಾರ ಪಿಎಂಜೆಡಿವೈನ ಫಲಾನುಭವಿಗಳಿಗೆ ರೂಪೆ ಡೆಬಿಟ್‌ಕಾರ್ಡ್ ನೀಡಲಾಗುತ್ತಿದೆ. ಇದರಲ್ಲಿ ೧ ಲಕ್ಷ ರೂ.ಗಳ ವಿಮೆ ನೀಡಲಾಗುತ್ತಿದೆ. ಜನ್‌ಧನ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ. ಈ ಖಾತೆದಾರರು ಸೌಲಭ್ಯ ವಂಚಿತರಾಗುತ್ತಾರೆ.
ಈ ಖಾತೆಯಲ್ಲಿ ೩೦ ಸಾವಿರ ರೂ.ಗಳ ಅಪಘಾತ ವಿಮೆ ಸಹ ಒಳಗೊಂಡಿದೆ. ಈ ಹಣ ಸಿಗಬೇಕಾದರೆ ಆಧಾರ್ ಕಾರ್ಡ್‌ನ್ನು ಬ್ಯಾಂಕಿನ ಖಾತೆಗೆ ಲಿಂಕ್ ಮಾಡಿದಾಗ ಮಾತ್ರ ಈ ಹಣ ಲಭ್ಯವಾಗಲಿದೆ.
ಆಧಾರ್ ಕಾರ್ಡ್ ಮತ್ತು ನಿಮ್ಮ ಪಾಸ್‌ಬುಕ್‌ನ ಫೊಟೊ ಪ್ರತಿ ತೆಗೆದುಕೊಂಡು ಆಧಾರ್ ಲಿಂಕ್ ಮಾಡಬಹುದಾಗಿದೆ. ಎಸ್‌ಬಿಐ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ಯುಐಡಿ ಸ್ಪೇಸ್ ಆಧಾರ್ ಸಂಖ್ಯೆ ಸ್ಪೇಸ್ ಖಾತೆ ಸಂಖ್ಯೆಯನ್ನು ಟೈಪ್ ಮಾಡಿ ೫೬೭೬೭೬ ಸಂಖ್ಯೆಗೆ ಕಳುಹಿಸಬಹುದು. ಆಗ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ.
ಆಧಾರ್ ಕಾರ್ಡ್, ಪಾಸ್‌ಪೋರ್ಟ್ ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಎನ್‌ಆರ್‌ಇಜಿಎ ಜಾಬ್ ಕಾರ್ಡ್ ಖಾತೆ ತೆರೆಯಲು ಗೆಜೆಟೆಡ್ ಅಧಿಕಾರಿ ನೀಡಿದ ಪತ್ರದ ಜತೆಗೆ ಪ್ರಾಧಿಕಾರದಿಂದ ನೀಡಲಾದ ಪತ್ರ, ಹೆಸರು. ವಿಳಾಸ ಮತ್ತು ಆಧಾರ್ ಸಂಖ್ಯೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಹತ್ತಿರದ ಎಟಿಎಂಗಳಿಗೆ ಲಿಂಕ್ ಮಾಡಬಹುದು.
ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಇದಲ್ಲದೆ ಪಿಎಂಜೆಡಿವೈ ಖಾತೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದರೆ ೫ ಸಾವಿರ ರೂ. ಒವರ್ ಡ್ರಾಫ್ಟ್ ಸೌಲಭ್ಯ ತೆರೆಯಬಹುದು.
ದೇಶದ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ ತೆರೆಯುವುದು ಇದರಿಂದ ಎಲ್ಲ ಸರ್ಕಾರಿ ಯೋಜನೆಗಳ ಲಾಭ ದೊರೆಯಲಿದೆ. ಪಿಎಂ ಜನ್‌ಧನ್ ಯೋಜನೆಯಡಿಯಲ್ಲಿ ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ತೆರೆಯಬಹುದಾಗಿದೆ.