ಜನ್ಮ ದಿನ: ಮಾಸ್ಕ್ ವಿತರಣೆ

ಧಾರವಾಡ, ಮೇ2: ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಸಲಕಿನಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾಗಿದ್ದ ಎನ್ ಮುತ್ತಪ್ಪ ರೈ ಅವರ ಹುಟ್ಟುಹಬ್ಬವನ್ನು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ವೇದಿಕೆಯಿಂದ ಜನರಿಗೆ ಮಾಸ್ಕ್‍ಗಳನ್ನು ವಿತರಿಸಿ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲಾಯಿತು.
ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾದವ್, ಕಮ್ಲು ಪೂಲವಾಲೆ, ಸೋಮು ಬೈಲವಾಡ, ನಾಗರಾಜ್ ದುಮ್ಮವಾಡ, ಕಲ್ಲಪ್ಪ ಕುಂದರಗಿ ರಿಯಾಜ್ ನಿಪ್ಪಾಣಿ, ನಾಗರಾಜ್ ಕುಂದರಗಿ, ಮಡಿವಾಳಿ ನೇಕಾರ, ಬಸವರಾಜ್ ಹೂಗಾರ, ರತ್ನಾ ನಿಂಗನಗೌಡ್ರ, ಸವಿತಾ ಬೈಲವಾಡ ಮುಂತಾದವರು ಉಪಸ್ಥಿತರಿದ್ದರು.