ಜನ್ಮ ದಿನಾಚರಣೆ ಅಂಗವಾಗಿ  ಉಚಿತ ಸಾಮೂಹಿಕ ವಿವಾಹ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.02  ಪಟ್ಟಣದ ಪುರಸಭೆ ಸದಸ್ಯ ಹಾಗೂ ಪಿ.ಎಲ್.ಬ್ಯಾಂಕ್ ಅದ್ಯಕ್ಷರಾದ ಬಿ.ಡಿ.ಗಂಗಣ್ಣ ಅವರ 50 ನೆ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬಿ.ಡಿ. ಗ್ರೂಪ್ ಹಾಗೂ ಗಂಗಣ್ಣ ಅಭಿಮಾನಿಗಳು ಪಟ್ಟಣದ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಕ್ಷೇತ್ರದ ಶಾಸಕ ಕೆ.ನೇಮಿ ರಾಜ್ ನಾಯ್ಕ್ ಉದ್ಘಾಟಿಸಿ ನೂತನ ವಧು ವರರಿಗೆ ಶುಭ ಕೋರಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಂದಿಪುರದ ಡಾ.ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ ಹುಟ್ಟು ಹಬ್ಬ ಎಂದರೆ ದೀಪಾ ಆರಿಸಿ ಕೇಕ್ ಕಟ್ ಮಾಡಿ ಪೇಸ್ ಬುಕ್ ,ವಾಟ್ಸಪ್ ನಲ್ಲಿ ಫೋಟೋ ಹಾಕಿ ಸಂಭ್ರಮಿಸುವ  ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆ ಮಾಡುವ ನಮ್ಮ ಸಂಸ್ಕೃತಿ ಅಧೋಗತಿಗೆ ತಳ್ಳುವ ಈ ದಿನಮಾನಗಳಲ್ಲಿ ಗಂಗಣ್ಣ ಅವರ ಅಭಿಮಾನಿಗಳು ಬಿ.ಡಿ.ಗ್ರೂಪ್ ನ ಬಳಗ ಸಾಮೂಹಿಕ ವಿವಾಹ ವಿಕಲ ಚೇತನರಿಗೆ ಕಿಟ್ ನೀಡುವ ಹಿರಿಯರಿಗೆ ಶಿಕ್ಷಕರಿಗೆ ಗೌರವ ಸಲ್ಲಿಸುವ  ಕಾರ್ಯಕ್ರಮ ಹಮ್ಮಿಕೊಂಡಿದ್ದು ಗಂಗಣ್ಣ ಅವರ ಆದರ್ಶ ವ್ಯಕ್ತಿತ್ವದ ಪ್ರೇರಣೆಯಿಂದ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು
ದಿವ್ಯ ಸಾನಿಧ್ಯ ವಹಿಸಿದ್ದ ಹಂಪಸಾಗರದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹಾಲಸ್ವಾಮಿ  ಮಠದ ಶ್ರೀ ಹಾಲ ಸಿದ್ದೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಯ ಮಲ್ಲಿಕಾರ್ಜುನ ಸ್ವಾಮೀಜಿ,ಉತ್ತಂಗಿ ಮಠದ ಸೋಮ ಶಂಕರ ಸ್ವಾಮೀಜಿ ಮಾತನಾಡಿದರು. ಪಿ.ಎಲ್.ಡಿ.ವ್ಯವಸ್ಥಾಪಕರಾದ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಣ್ಣಿ ಹಳ್ಳಿಯ ಪಂಚಾಕ್ಷರಿ ಸ್ವಾಮೀಜಿ ,ಮುಖಂಡರಾದ ಬನ್ನಿಗೊಳು ವೆಂಕಣ್ಣ, ಬಾದಾಮಿ ಮೃತ್ಯುಂಜಯ,ಎಂ ಪಿ.ಕೊಟ್ರೇಶ್,ಜಿ.ಎಂ ಜಗದೀಶ್,ಅಂಬಣ್ಣ, ತಿಪ್ಪೇರುದ್ರಮುನಿ ಸ್ವಾಮಿ, ನಾರಾಯಣ,ವರ್ತಕ ಕುಮಾರ್, ಪತ್ರಿ ಬಸವೇಶ್ವರ ದೇವಸ್ಥಾನದ ಅರ್ಚಕ ಕೆ.ಕೆ. ಬಿ.ಎಂ. ಕೊಟ್ರಯ್ಶ ಬಿ.ಡಿ.ಗ್ರೂಪ್ ಅಭಿಮಾನಿ ಬಳಗ,ಪತ್ರಿ ಬಸವೇಶ್ವರ ಯುವಕ ಸಂಘದ ಸದಸ್ಯರು ವಧು ವರರ ಸಂಬಂಧಿಗಳು ಕೆ.ವಿ. ಓ.ಆರ್.ಕಾಲೋನಿ ನಾಗರಿಕರು ಪಾಲ್ಗೊಂದಿದ್ದರು. ಬ್ಯಾಲಾಳ ಕರಿ ಬಸವನಗೌಡ ಕಾರ್ಯಕ್ರಮ ನಿರ್ವಹಿಸಿದರು.